ಶ್ವಾನಗಳಿಗೆ ಊಟ ಹಾಕುವ ವಿಚಾರಕ್ಕೆ ಜಟಾಪಟಿ ನಡೆದ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.ಸ್ಥಳೀಯರು ಬೀದಿನಾಯಿಗಳಿಂದ ಬೇಸತ್ತು ಹೋಗಿದ್ದು,ಬೀದಿ ನಾಯಿಗೆ ಊಟ ಹಾಕ್ತಿದ್ದಂತೆ ಬೀದಿ ನಾಯಿ ಸಂಖ್ಯೆ ಹೆಚ್ಚಳ ಆರೋಪ ಕೇಳಿಬಂದಿದೆ.ಜೊತೆಗೆ ಮಕ್ಕಳನ್ನ ಹೊರಗಡೆ ಆಟವಾಡಲು ಬಿಡೋದಕ್ಕೆ ಭಯವಾಗಿದೆ.ಶ್ವಾನ ಮಕ್ಕಳಿಗೆ ಕಚ್ಚುತ್ತೆ ಅನ್ನುವ ಭಯದಲ್ಲಿ ಸ್ಥಳೀಯರು ಇದ್ದು,ಇನ್ನೊಂದೆಡೆ ಬೀದಿ ನಾಯಿಗಳಿಗೆ ಊಟ ಹಾಕೋಕೆ ಬಂದ ಮಹಿಳೆಗೆ ಹಲ್ಲೆ ಆರೋಪ ಕೇಳಿಬಂದಿದೆ.ನಾಲ್ಕು ಜನ ಸೇರಿಕೊಂಡು ಮಹಿಳೆಗೆ ಅವಾಚ್ಯ ಶಬ್ಥಗಳಿಂದ ನಿಂದನೆ ಆರೋಪವು ಸಹ ಕೇಳಿ ಬಂದಿದೆ.
ಯಮುನಾ ಎಂಬಾಕೆಯಿಂದ ನಂದನ್ ಸೇರಿ ನಾಲ್ವರ ವಿರುದ್ಧ ದೂರು ನೀಡಲಾಗಿದ್ದು,ದೂರಿನನ್ವಯ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಮೈ ಮುಟ್ಟಿ ಹಲ್ಲೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು,ಸದ್ಯ ದೂರು ದಾಖಲಿಸಿಕೊಂಡು ಪೊಲೀಸರಯ ತನಿಖೆ ನಡೆಸಿದ್ದಾರೆ.ಪ್ರತಿನಿತ್ಯ ಶ್ವಾನಗಳಿಗೆ ಆಹಾರ ಹಾಕ್ತಿದ್ದ ಐಶ್ವರ್ಯ ಆರೋಗ್ಯ ಸರಿ ಇಲ್ಲದ ಕಾರಣ ಸ್ನೆೇಹಿತೆ ಯಮುನಾಗೆ ಊಟ ಹಾಕಲು ಹೇಳಿದ್ರು.ಊಟ ಹಾಕಿದ್ದಕ್ಕೆ ಸ್ಥಳೀಯರು ರೊಚ್ಚಿಗೆದ್ದ ಗಲಾಟೆ ನಡೆಸಿದ್ದಾರೆ.