ಕಾಂಗ್ರೆಸ್ : 45 ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಲು ಪಟ್ಟು

ಶನಿವಾರ, 1 ಏಪ್ರಿಲ್ 2023 (10:23 IST)
ಬೆಂಗಳೂರು : ಕಾಂಗ್ರೆಸ್ ನ ಮೊದಲ ಪಟ್ಟಿ ಈಗಾಗಲೇ ಘೋಷಣೆಯಾಗಿದೆ. ಮೊದಲ ಲಿಸ್ಟ್ ನಲ್ಲಿ 124 ಮಂದಿ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಲಾಗಿದೆ.
 
ಇದೀಗ ಉಳಿದ ಕ್ಷೇತ್ರಗಳಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೊನೆಯ ಹಂತದ ಕಸರತ್ತು ನಡೆಸಿದ್ದಾರೆ.

100 ಕ್ಷೇತ್ರದಲ್ಲಿ 45 ಕ್ಷೇತ್ರದಲ್ಲಿ ತಮ್ಮವರಿಗೆ ಟಿಕೆಟ್ ಕೊಡಿಸಿಕೊಳ್ಳಲು ಇಬ್ಬರು ಬಿಗಿ ಪಟ್ಟು ಹಿಡಿದಿದ್ದಾರಂತೆ. 45 ಕ್ಷೇತ್ರಗಳೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಪಾಲಿಗೆ ನಿರ್ಣಾಯಕವಾಗುತ್ತಾ. ಮಧ್ಯರಾತ್ರಿವರೆಗೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದರು ಇಬ್ಬರದ್ದು ಮುಗಿಯದ ಕಥೆಯಾಗಿದೆ. ದೆಹಲಿ ಅಂಗಳದಲ್ಲಿ ಹೈಕಮಾಂಡ್ ಸಮ್ಮುಖದಲ್ಲಿ ಇಬ್ಬರಲ್ಲಿ ಯಾರು ಪವರ್ ಫುಲ್ ನಾಯಕರು ಅನ್ನೋ ಚರ್ಚೆ ಶುರುವಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ