ಕಾಂಗ್ರೆಸ್ ಸಂಪರ್ಕಿಸಿಲ್ಲ, ಬಿಜೆಪಿ ತೊರೆಯಲ್ಲ
ಕಾಂಗ್ರೆಸ್ ಸೇರುತ್ತಾರೆ ಅನ್ನೋ ವದಂತಿ ಬೆನ್ನಲ್ಲೇ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹುಬ್ಬಳ್ಳಿಯಲ್ಲಿ ತುರ್ತು ಸುದ್ದಿಗೋಷ್ಠಿ ಕರೆದಿದ್ದರು. ಯಾವ ಕಾಂಗ್ರೆಸ್ ನಾಯಕರೂ ಸಂಪರ್ಕಿಸಿಲ್ಲ ಮತ್ತು ಸದ್ಯ ಬಿಜೆಪಿ ತೊರೆಯಲ್ಲ ಎಂದು ಸ್ಪಷ್ಟಪಡಿಸಿದರು. ನಾನು ಸದ್ಯ ಕಾಂಗ್ರೆಸ್ಗೆ ಹೋಗಲ್ಲ ಹಾಗೂ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗುವ ಇಚ್ಛೆಯೂ ನನಗಿಲ್ಲ. ಸ್ಪರ್ಧೆ ಮಾಡಬೇಕಾದ್ರೆ ಎಂಟು ಕ್ಷೇತ್ರಗಳ ಸಂಘಟನೆ ಮಾಡಬೇಕಾಗುತ್ತದೆ. ಆದ್ರೆ, ಪಕ್ಷದಲ್ಲಿನ ಮುಖಂಡರ ವರ್ತನೆಗೆ ಬೇಸರವಿದೆ. ನನ್ನನ್ನು ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.