ರಮೇಶ್ ಜಾರಕಿಹೊಳಿದು, ಆರ್.ಡಿ.ಪಿ ಆರ್ ಮಂತ್ರಿಗಳದ್ರು ಅವರು ಹಾಕಿಕೊಟ್ಟ ದಾರಿಯನ್ನೇ ನಾವು ಫಾಲೋ ಮಾಡ್ತಿದ್ದೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.ವಿವಿಧ ಪ್ರಕರಣಗಳ ತನಿಖೆ ವಿಚಾರವಾಗಿ ಸದಾಶಿವನಗರದಲ್ಲಿ ಮಾತನಾಡಿದ ಅವರು ಹಿಂದೆ ನಾವು ಸಾಕಷ್ಟು ಆರೋಪ ಮಾಡಿದ್ವಿ.ರಮೇಶ್ ಜಾರಕಿಹೊಳಿದು, ಆರ್.ಡಿ.ಪಿ ಆರ್ ಮಂತ್ರಿಗಳದ್ರು.ಅವರು ಹಾಕಿಕೊಟ್ಟ ದಾರಿಯನ್ನೇ ನಾವು ಫಾಲೋ ಮಾಡುತ್ತಿದ್ದೇವೆ. ಸಂತೋಷ್ ಪಾಟೀಲ್ ವಿಚಾರವಾಗಿ ತನಿಖೆ ಮಾಡುವಂತೆ ಅವರ ಮನೆಯವರು ಮನವಿ ಮಾಡಿದ್ರು. ತನಿಖೆ ನಡೆಯೋ ಮೊದಲೇ ದೋಷಮುಕ್ತರಾಗಿ ಬರ್ತಾರೆ ಅಂತ ಅವರೇ ಹೇಳಿಕೊಂಡಿದ್ರು. ಇನ್ವೆಸ್ಟಿಗೇಷನ್ ಟೀಮ್ ದಿಕ್ಕು ತಪ್ಪಿಸಿದ್ರು.ಅದೇ ದಾರಿ ನಮಗೆ ತೋರಿಸಿದ್ದಾರೆ. ಸಮಾಜ ಏನು ಒಪ್ಪಿದೆ ನಾವು ಅದನ್ನ ಮಾಡ್ತಿದ್ದೇವೆ. ನೀವು ಕ್ಲೀನ್ ಇದ್ದಾಗ ಭಯ ಯಾಕೆ.?.ನಮ್ಮ ಮೇಲೆ ಆರೋಪ ಮಾಡಲಿಲ್ಲವಾ.? ಇನ್ನೂ ತೆಗೀಬೇಕಾ... ಬೆಂಗಳೂರು ಸುತ್ತ ಮುತ್ತಲಿನ ಪಟ್ಟಿ ತೆಗೀಬೇಕಾ ಎಂದು ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೆ ವಾರ್ನಿಂಗ್ ನೀಡಿದ ಡಿಕೆಶಿವಕುಮಾರ್.
ನೈಸ್ ವಿಚಾರವಾಗಿ ದೇವೇಗೌಡರ ಸುದ್ದಿಗೋಷ್ಠಿ ವಿಚಾರವಾಗಿ ಪ್ರತಿಕ್ರಿಯಿಸಿ ಯಾರು ಏನ್ ಬೇಕಾದ್ರೂ ಬಿಚ್ಚಲಿ, ಪಟ್ಟಿ ತೆಗೀಲಿ, ಏನು ಬೇಕಾದ್ರೂ ಮಾಡಲಿ. ಹಿಂದೆ ಅಧಿಕಾರದಲ್ಲಿ ಇದ್ದಾಗ ಇವರಿಗೆ ಅಥಾರಿಟಿ ಇತ್ತು ಯಾಕೆ ಮಾಡಲಿಲ್ಲ.? ಪ್ಯಾಂಟ್ ಹಾಕಿದವರು ಯಾರು, ರೈತರು ಯಾರು, ಪಂಚೆ ಉಟ್ಟಿರೋರು ಯಾರು ಅಂತ ಗೊತ್ತಾಗಿದೆ.ರಾಜಕಾರಣಿಗಳದ್ದು ಯಾರದ್ದೂ ಇಲ್ಲವಾ.? ನಮ್ಮತ್ರ ಪಟ್ಟಿ ಇಲ್ಲವಾ.? ನಮ್ಮ ಬಳಿ ಇರೋ ಪಟ್ಟಿ ತೆಗೀಲಾ.? ಒಂದಿಂಚು ಭೂಮಿ ಇಲ್ಲಾ ಅಂತಾರೆ.ಇವರದ್ದು ಹಾಗಾದ್ರೆ ಏನೂ ಇಲ್ಲವಾ.? ನನ್ನ ಎಷ್ಟು ಸ್ಕ್ಯಾನ್ ಮಾಡಬೇಕೋ ಇಡಿ, ಐಟಿ ಎಲ್ಲಾರೂ ಸ್ಕ್ಯಾನ್ ಮಾಡಿದ್ದಾರೆ.ಅದರ ವರದಿ ಕೂಡ ಕೊಟ್ಟಿದ್ದಾರೆ ಎಂದು ಹೇಳಿದರು.