ನಾನು ಪಕ್ಷ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ-ಎಸ್ ಟಿ ಸೋಮಶೇಖರ್

ಸೋಮವಾರ, 28 ಆಗಸ್ಟ್ 2023 (14:52 IST)
ಯಶವಂತಪುರದಲ್ಲಿ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ನಮ್ಮ ಯಶವಂತಪುರ ಕ್ಷೇತ್ರದಲ್ಲಿ  Apl ಹಾಗು bpl ಎಷ್ಟು ಜನ ಇದಾರೆ.ನಮ್ಮ ಕ್ಷೇತ್ರದಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಎಷ್ಟು ಫಲಾನುಭವಿಗಳು ಇದಾರೆ ಎಂಬ ಮಾಹಿತಿ ಬಗ್ಗೆ ಚರ್ಚೆ ನಡೆಯುತ್ತಿದೆ.ಈಗ 17 ಪಂಚಾಯತ್ ವ್ಯಾಪ್ತಿಯ ಮುಖಂಡರ ಸಭೆ ಕರೆದಿದ್ದೇನೆ.ಯಾರಾದರೂ ಬಿಟ್ಟು ಹೋದರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.ಮಧ್ಯಾಹ್ನ 3 ಗಂಟೆಗೆ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮುಖಂಡರ ಸಭೆ ನಡೆಸುತ್ತೇನೆಸರ್ಕಾರ ಏನು ಮಾಡಿದ್ರು ಸರಿಯಾದ ರೀತಿಯಲ್ಲಿ ಜನರಿಗೆ ತಲುಪಬೇಕು.ಸರ್ಕಾರದ ಯೋಜನೆ ತಲುಪಿಸುವ ಸಲುವಾಗಿ ಅಧಿಕಾರಿಗಳು ಸಹ ಕೆಲಸ ಮಾಡುತ್ತಿದ್ದಾರೆ.ನಾವೆಲ್ಲರೂ ಶ್ರಮ ಹಾಕಿದ್ರೆ ಜನರಿಗೆ ನೂರಕ್ಕೆ ನೂರರಷ್ಟು ಗೃಹ ಲಕ್ಷ್ಮೀ ಯೋಜನೆ ತಲುಪುತ್ತದೆ .ಪ್ರಾಮಾಣಿಕ ಪ್ರಯತ್ನ ಮಾಡಬೇಕು.ಕೆಲವರು ಯಾರೋ ಮಾಧ್ಯಮಕ್ಕೆ
ಮಾಹಿತಿ ನೀಡಿದ್ದಾರೆ.ಏನೋ ಸಭೆ ಕರೆದಿದ್ದಾರೆ ಅಂತ ಮಾಹಿತಿ ನಿಡೀದ್ದಾರೆ.ಸೋಮಶೇಖರ್ ಏನೋ ಸಭೆ ಮಾಡ್ತಿಲ್ಲ.ಸೋಮಶೇಖರ್ ಇಲ್ಲಿ ಎಷ್ಟ್ರಾ ಏನು ಸಹ ಮಾತಾಡಲ್ಲ .ಸರ್ಕಾರದ ಯೋಜನೆ ಜನರಿಗೆ ತಲುಪಿಸುವ ಸಭೆ ಅಷ್ಟೇ ಮಾಡುತ್ತಿದ್ದೇನೆ.ಗೃಹ ಲಕ್ಷ್ಮೀ ಎಷ್ಟು ಇದಾರೆ..? ಎಷ್ಟು ಬ್ಯಾಲೆನ್ಸ್ ಇದೆ ಅಂತ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಸೋಮಶೇಖರ್ ಹೇಳಿದ್ರು.
 
ಅಕ್ಲದೇ ಈ ವೇಳೆ ನಾನು ಪಕ್ಷ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ.ಕಾಂಗ್ರೆಸ್ ನಾಯಕರ ಜತೆಗೂ ಇದರ ಬಗ್ಗೆ ಮಾತಾಡಿಲ್ಲ.ಸಿಎಂ ಜತೆಗೂ ರಾಜಕೀಯ ಮಾತಾಡಿಲ್ಲ.ಕಾಂಗ್ರೆಸ್ ಗೆ ನನ್ನ ಬೆಂಬಲಿಗರು ಅಷ್ಟೇ ಅಲ್ಲ, ಎಲ್ಲ‌ ಕ್ಷೇತ್ರಗಳಿಂದಲೂ ಹೋಗಿದಾರೆ.ಯಾರು ಜಿ.ಪಂ, ತಾ.ಪಂ, ಬಿಬಿಎಂಪಿಗೆ ಸ್ಪರ್ಧೆ ಮಾಡ್ಬೇಕು ಅನ್ಕೊಂಡಿದ್ರೋ‌ ಅವರು ಕಾಂಗ್ರೆಸ್ ಗೆ ಹೋಗಿದಾರೆ.ಯಾರು ಶಾಸಕರ ಜತೆ ಇರ್ಬೇಕು ಅನ್ಕೊಂಡಿದಾರೋ ಅವರು ನನ್ನ ಜತೆಯೇ ಇದ್ದಾರೆ.ನನ್ನ ಜತೆ 85 ಮುಖಂಡರು ಉಳ್ಕೊಂಡಿದ್ದಾರೆ.ಯಡಿಯೂರಪ್ಪ ಜತೆಗೂ ಮಾತುಕತೆ ಆಡಿದ್ದೇನೆ.ದುಡುಕಬೇಡ ಅಂತ ಯಡಿಯೂರಪ್ಪ ಹೇಳಿದ್ದಾರೆ.ನಾನು ದುಡುಕುತ್ತಿಲ್ಲ ಎಂದು ಎಸ್ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
 
ಶಾಸಕನಾಗಿ ನಾನು ನನ್ನ ಕೆಲಸ ಮಾಡ್ತಿದ್ದೇನೆ.ಅವರ್ಯಾರೋ ಅಂತಾರೆ ಇವರ್ಯಾರೋ ಅಂತಾರೆ ಅಂತ ನಾನು ನೋಡಲ್ಲ.ಕ್ಷೇತ್ರದ ಜನರ ಸೇವೆ ನನಗೆ ಮುಖ್ಯ.ಸರ್ಕಾರದ ಯೋಜನೆ ನನ್ನ ಕ್ಷೇತ್ರದ ಜನರಿಗೆ ಸಿಗದಂತೆ ಆಗಬಾರದು.ನಾನು ಬಿಜೆಪಿ ಬಿಡುವ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಿಲ್ಲ.ದೆಹಲಿ ಭೇಟಿ ವಿಚಾರವಾಗಿ ನನ್ನ ದೆಹಲಿ ನಾಯಕರು ಯಾರೂ ಸಂಪರ್ಕ ಮಾಡಿಲ್ಲ.ಬೇರೆಯವರ ಮೂಲಕ ದೆಹಲಿ ನಾಯಕರನ್ನು ಸಂಪರ್ಕ ಮಾಡಿ ಅಂತಾ ಇಲ್ಲಿಯವರು ಹೇಳುತ್ತಿದ್ದಾರೆ.ನಾನು ಯಶವಂತಪುರ ಕ್ಷೇತ್ರದ ಸಾಮಾನ್ಯ ಶಾಸಕ ಎಂದು ಸೋಮಶೇಖರ್ ಸ್ಪಷ್ಟೀಕರಣ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ