ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣವಲ್ಲ- ಹೆಚ್.ಎಂ.ರೇವಣ್ಣ ವಾಗ್ದಾಳಿ
ಶುಕ್ರವಾರ, 25 ಅಕ್ಟೋಬರ್ 2019 (11:13 IST)
ಬೆಂಗಳೂರು : ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣವಲ್ಲ. ಶಾಸಕರನ್ನ ಕುಮಾರಸ್ವಾಮಿ ಸರಿಯಾಗಿ ನಡೆಸಿಕೊಂಡಿಲ್ಲದಿರುವುದೇ ಕಾರಣ ಎಂದು ಕುಮಾರಸ್ವಾಮಿ ವಿರುದ್ಧ ಹೆಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದ ಕುಮಾರಸ್ವಾಮಿ ಆರೊಪಕ್ಕೆ ಈ ರೀತಿಯಾಗಿ ಪ್ರತಿಕ್ರಿಯಿಸಿದ ಹೆಚ್.ಎಂ.ರೇವಣ್ಣ , ಕುಮಾರಸ್ವಾಮಿ ಸರಿಯಾಗಿ ನಡೆದುಕೊಂಡಿದ್ರೆ ಏನು ಆಗ್ತಾ ಇರಲಿಲ್ಲ ಎಂದು ಹೇಳಿದ್ದಾರೆ.
ನಾನೇ ಏನಾದ್ರೂ ಕೇಳಿದ್ರೆ ಕೆಲಸ ಆಗ್ತಾ ಇರಲಿಲ್ಲ. ಅಣ್ಣಾ ಏನಣ್ಣಾ ಅಂತಾ ಚೆನ್ನಾಗಿ ಮಾತಾಡಿ ಕಳುಹಿಸುತ್ತಿದ್ರು, ಈಗ ತಮ್ಮ ತಪ್ಪನ್ನು ಸಿದ್ದರಾಮಯ್ಯ ಮೇಲೆ ಹಾಕೋದು ಎಷ್ಟು ಸರಿ..? ಎಂದು ಅವರು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.