Hassan: ಹೌದು, ನಾವು ಅಲ್ಪ ಸಂಖ್ಯಾತರ ಪರವೇ, ಮುಚ್ಚಿಡುವಂತಹದ್ದು ಏನಿದೆ: ಗೃಹಸಚಿವ ಪರಮೇಶ್ವರ್

Krishnaveni K

ಗುರುವಾರ, 5 ಡಿಸೆಂಬರ್ 2024 (14:04 IST)
ಹಾಸನ: ಕಾಂಗ್ರೆಸ್ ನ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಗೃಹಸಚಿವ ಪರಮೇಶ್ವರ್ ನಾವು ಅಲ್ಪ ಸಂಖ್ಯಾತರ ಪರವಾಗಿಯೇ ಇದ್ದೇವೆ. ಅದರಲ್ಲಿ ಮುಚ್ಚಿಟ್ಟುಕೊಳ್ಳುವಂತಹದ್ದು ಏನಿಲ್ಲ ಎಂದಿದ್ದಾರೆ.

ಹಾಸನದಲ್ಲಿ ಇಂದು ಕಾಂಗ್ರೆಸ್ ಜನಲಕ್ಯಾಣ ಸಮಾವೇಶ ಹಮ್ಮಿಕೊಂಡಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ. ಈ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಗೃಹಸಚಿವ ಪರಮೇಶ್ವರ್ ‘ವಕ್ಫ್ ಗೆ ಸಾವಿರಾರು ಕೋಟಿ ಜಮೀನು ನೋಟಿಫಿಕೇಷನ್ ಮಾಡಿದ್ದು ಬಿಜೆಪಿ ಕಾಲದಲ್ಲಿ. ಆದರೆ ಈಗ ಕಾಂಗ್ರೆಸ್ ಮೇಲೆ ರೈತರ ಜಮೀನು ಕಬಳಿಸಿದ ಆರೋಪ ಮಾಡುತ್ತಿದ್ದಾರೆ. ಹೌದು, ನಾವು ಅಲ್ಪ ಸಂಖ್ಯಾತರ ಪರವಾಗಿಯೇ ಇದ್ದೇವೆ. ಅದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ.

ಯಾಕೆಂದರೆ ಅಲ್ಪ ಸಂಖ್ಯಾತರೂ ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿಯೇ ಸಾಯುವವರು. ಅವರಿಗೂ ಈ ದೇಶದ ಮೇಲೆ ಹಕ್ಕಿದೆ. ಹಾಗಿರುವಾಗ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುವುದೇ ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ’ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ