ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಸಿಎಂ ಪದವಿ ಬಗ್ಗೆ ಚರ್ಚೆ ಮಾಡಿಲ್ಲ: ಪರಮೇಶ್ವರ್

Sampriya

ಗುರುವಾರ, 10 ಅಕ್ಟೋಬರ್ 2024 (12:57 IST)
Photo Courtesy X
ಬೆಂಗಳೂರು: ನಾನಗಾಲೀ, ಸತೀಶ್ ಜಾರಕಿಹೊಳಿ, ಮಹಾದೇವಪ್ಪ ಆಗಲಿ, ಯಾರೂ ಕೂಡಾ ಸಿಎಂ ಪದವಿ ಬಗ್ಗೆ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಅವರು ಇಂದು ಸದಾಶಿವನಗರದ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್‌  ಅವರನ್ನ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ, ಮುಡಾ ಪ್ರಕರಣ ಸೇರಿ ಕೆಲವು ಮಹತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ ಎಂಬ ಮಾಹಿತಿಯಿದೆ.

ಪ್ರತ್ಯೇಕ ಸಭೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಲು ತಾಕೀತು ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಈ ಹಿಂದೆಯೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ನಾವು ಹೇಳಿದ್ದೇವೆ. ದರಲ್ಲಿ ಏನೂ ಬದಲಾವಣೆಯಾಗುವುದಿಲ್ಲ. ಇನ್ಮುಂದೆ ನಾವು ಸಿಎಂ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

ನಾವು ಅನವಶ್ಯಕವಾಗಿ ಡಿನ್ನರ್ ಮೀಟಿಂಗ್, ರಾಜಕೀಯ ಮೀಟಿಂಗ್ಸ್ ಮಾಡಿಲ್ಲ, ಮಾಡುವುದೂ ಇಲ್ಲ. ಮುಂದೆಯೂ ಅನವಶ್ಯಕ ಭೇಟಿಗಳನ್ನು ಮಾಡಲ್ಲ. ಇದು ನನ್ನ ಸ್ಪಷ್ಟ ಹೇಳಿಕೆ. ನಮ್ಮನ್ನು ಆಪಾದಿತ ಸ್ಥಾನದಲ್ಲಿ ನೋಡಿದರೆ ನಮಗೂ ಬೇಜಾರು ಆಗಾಲ್ವ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಹುಡುಗಾಟಿಕೆ ಮಾಡುವುದಿಲ್ಲ ಎಂದು ಗರಂ ಆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ