ಪ್ರಧಾನಿ ಮೋದಿ ಬಳಿ ಕ್ಷಮೆಯಾಚಿಸಿದ ಕಾಂಗ್ರೆಸ್ ನಾಯಕ. ಕಾರಣವೇನು ಗೊತ್ತಾ?

ಬುಧವಾರ, 6 ಮಾರ್ಚ್ 2019 (05:45 IST)
ಬೆಂಗಳೂರು : ಪ್ರಧಾನಿ ಮೋದಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಬೇಳೂರು ಗೋಪಾಲ ಕೃಷ್ಣ ಇದೀಗ ಪ್ರಧಾನಿ ನರೇಂದ್ರ ಮೋದಿ ಬಳಿ ಕ್ಷಮೆಯಾಚಿಸಿದ್ದಾರೆ.


ಫೆ. 4 ರಂದು ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಬೇಳೂರು ಗೋಪಾಲ ಕೃಷ್ಣ ಅವರು, ಪ್ರಧಾನಿ ಮೋದಿಯನ್ನು ಗುಂಡಿಟ್ಟು ಸಾಯಿಸಿ ಎಂದು ಹೇಳಿಕೆ ನೀಡಿದ್ದರು.


ಆದರೆ ಈ ಬಗ್ಗೆ ಕ್ಷಮೆಯಾಚಿಸಿದ ಅವರು,’ ಮೋದಿಯವರಿಗೆ ಅವಮಾನ ಮಾಡಬೇಕು ಎನ್ನುವ ಉದ್ದೇಶ ನನಗಿರಲಿಲ್ಲ, ಪ್ರಧಾನಿ ಮೋದಿಯವರಿಗೆ ನೀವು ಗುಂಡು ಹಾಕ್ತೀರಾ? ಎಂದು ಬಿಜೆಪಿ ಮುಖಂಡರಿಗೆ ಚಾಲೆಂಜ್ ಮಾಡಿದ್ದೆ, ಆದರೆ ಅವಮಾನ ಮಾಡಬೇಕು ಎನ್ನುವ ಉದ್ದೇಶ ನನಗಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಅವಮಾನ ಮಾಡಿದ ಹಿಂದೂ ಮಹಾಸಭಾ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಹಾಗೆ ಮಾಡಿದ್ದು ನಿಜ , ಆದರೆ ರಾಷ್ಟ್ರಪಿತನಿಗೆ ಅವಮಾನ ಮಾಡಿದ್ದು,. ನನ್ನ ಮನಸ್ಸಿಗೆ ನೋವುಂಟು ಮಾಡಿತ್ತು ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ