ಟ್ವೀಟರ್ ನಲ್ಲಿ ಮತ್ತೆ ಮೋದಿಯ ಕಾಲೆಳೆದ ರಮ್ಯಾ

ಮಂಗಳವಾರ, 5 ಮಾರ್ಚ್ 2019 (10:58 IST)
ಬೆಂಗಳೂರು : ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರು ಮತ್ತೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.


ಪ್ರಧಾನಿ ಮೋದಿ ಗುಜರಾತಿನಲ್ಲಿ ಭಾಷಣ ಮಾಡಿದ ವಿಡಿಯೋ ಪ್ರಧಾನ ಮಂತ್ರಿಗಳ ಟ್ವಿಟ್ಟರ್ ಖಾತೆಯಿಂದ ಅಪ್ಲೋಡ್ ಆಗಿತ್ತು. ಅಲ್ಲದೇ ಉಗ್ರರ ಮೇಲಿನ ಏರ್ ಸ್ಟ್ರೈಕ್ ವಿಚಾರವನ್ನು ಪ್ರಶ್ನಿಸಿದವರಿಗೆ ಪ್ರಧಾನಿ ಮೋದಿ, ಉಗ್ರರ ಮೇಲೆ ದಾಳಿ ನಡೆಸಿದ ಭದ್ರತಾ ಪಡೆಯನ್ನು ಸಂಶಯದಿಂದ ನೋಡುತ್ತೀರಿ. ನಿಮಗೆ ಅವರ ಮೇಲೆ ನಂಬಿಕೆ ಇಲ್ಲವೇ? ನಮ್ಮ ಸೇನೆಯ ಬಗ್ಗೆ ನಿಮಗೆ ಹೆಮ್ಮೆ ಇಲ್ಲವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.


ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ  ರಮ್ಯಾ, ನಮಗೆ ಸೇನೆ ಮೇಲೆ ನಂಬಿಕೆಯಿದೆ. ಸೇನೆ ಯಾವಾಗಲೂ ದಾಖಲೆ ಇಟ್ಟುಕೊಂಡು ಮಾತನಾಡುತ್ತದೆ. ಆದರೆ ನಮಗೆ ನಿಮ್ಮ ಮೇಲೆ ನಂಬಿಕೆಯಿಲ್ಲ. ನೀವು ಸದಾ ಸುಳ್ಳು ಹೇಳುತ್ತೀರಿ. 2014ರಲ್ಲಿ ನೀವು ಇದನ್ನೇ ಹೇಳಿ ನಂತರ ಪಾಕಿಸ್ತಾನಕ್ಕೆ ತೆರಳಿ ನವಾಜ್ ಷರೀಫ್ ಜೊತೆ ಬಿರಿಯಾನಿ ತಿಂದು ಮರಳಿದಿರಿ. ಹೀಗಾಗಿ ಈ ಸಮಯದಲ್ಲಿ ನಾವು ನಿಮ್ಮನ್ನು ನಂಬುವುದು ಹೇಗೆ? ನೋಟು ನಿಷೇಧ ಮಾಡಿದರೆ ಭಯೋತ್ಪಾದನೆ ನಿಲ್ಲುತ್ತದೆ ಎಂದು ಹೇಳಿದ್ದೀರಿ. ಆದರೆ ಇದು ಕಾರ್ಯಗತವಾಗಲಿಲ್ಲ. ನನ್ನ ಪ್ರಕಾರ ಸ್ಟ್ರೈಕ್ ಎಲ್ಲರನ್ನು ಹತ್ಯೆ ಮಾಡಿರಬಹುದು ಅಲ್ಲವೇ ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ರಮ್ಯಾ ಟ್ವೀಟ್ ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ