ಆದ್ದರಿಂದ ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸಿ ಬಳಸುವುದರಿಂದ ಕೂದಲುದುರುವ ಸಮಸ್ಯೆಯನ್ನು ತಡೆಗಟ್ಟಬಹುದು. ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸುವುದು ಹೇಗೆಂದು ನೋಡೋಣ.
ನೊರೆಕಾಯಿ(soap nuts) ಪುಡಿ 5 ಟೀ ಚಮಚ, ಸೀಗೆಕಾಯಿ ಪುಡಿ 5 ಟೀ ಚಮಚ, ಬೆಟ್ಟದ ನೆಲ್ಲಿಕಾಯಿ ಪುಡಿ 5 ಟೀ ಚಮಚ, ಮೆಂತ್ಯ ಕಾಳು ಪುಡಿ 2 ಟೀ ಚಮಚ, ಅಲೋವೆರಾ ಜೆಲ್ 1 ಟೇಬಲ್ ಚಮಚ ಎಲ್ಲಾವನ್ನು ¼ ಲೀ ನೀರಿಗೆ ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಕುದಿಸಿ ಅದು ತಣ್ಣಗಾದ ಮೇಲೆ ಸೋಸಿ 1 ಗಾಜಿನ ಬಾಟಲ್ ನಲ್ಲಿ ಹಾಕಿಡಿ, ಇದನ್ನು 7 ದಿನ ಬಳಸಬಹುದು. ಈ ಸಾಂಪನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.