ಕಾಂಗ್ರೆಸ್ ನಾಯಕರ ಬೌದ್ದಿಕ ದಿವಾಳಿತನಕ್ಕೆ ಬೇಸತ್ತು ರಾಜೀನಾಮೆ: ಎಚ್.ವಿಶ್ವನಾಥ್

ಶುಕ್ರವಾರ, 23 ಜೂನ್ 2017 (13:24 IST)
ಕಾಂಗ್ರೆಸ್ ನಾಯಕರ ಬೌದ್ದಿಕ ದಿವಾಳಿತನದಿಂದಾಗಿ ರಾಜೀನಾಮೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಗುಡುಗಿದ್ದಾರೆ.
 
ಕಾಲ್ನಡಿಗೆ ಜಾಥಾ ಮೂಲಕ ಕೆಪಿಸಿಸಿ ಕಚೇರಿಗೆ ಆಗಮಿಸಿದ ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. 
 
ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ದುಡಿದಿದ್ದೇನೆ. ಆದರೆ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವರ್ತನೆ ನೋವು ತಂದಿದೆ. ಎಐಸಿಸಿ ಸದಸ್ಯನಾಗಿದ್ದರೂ ನನ್ನ ಸಲಹೆ ಪಡೆಯುವುದಾಗಲಿ ಅಥವಾ ಯಾವುದೇ ಸಭೆಗೆ ಆಹ್ವಾನ ನೀಡುವುದಾಗಲಿ ಮುಖಂಡರು ಮಾಡಲಿಲ್ಲ. ದಿವ್ಯನಿರ್ಲಕ್ಷಕ್ಕೆ ಒಳಗಾಗಿರುನ ನಾನು ಪಕ್ಷದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎನ್ನಿಸಿದ್ದರಿಂದ ಪಕ್ಷಕ್ಕೆ ಗುಡ್‌ಬೈ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
 
ಮಾಜಿ ಸಂಸದ ಎಚ್.ವಿಶ್ವನಾಥ್, ಜಿ.ಪರಮೇಶ್ವರ್‌ರನ್ನು ತಬ್ಬಿಕೊಂಡ ನಂತರ ರಾಜೀನಾಮೆ ಪತ್ರ ಸಲ್ಲಿಸಿದರು. 
 
ವಿಶ್ವನಾಥ್ ರಾಜೀನಾಮೆ ಪತ್ರ ಸ್ವೀಕರಿಸಿದ ನಂತರ ಮಾತನಾಡಿದ ಪರಮೇಶ್ವರ್, ರಾಜೀನಾಮೆ ಪತ್ರವನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸಲಾಗುವುದು. ಅವರ ಮನವೊಲಿಸಲು ತುಂಬಾ ಪ್ರಯತ್ನ ಪಟ್ಟಿದ್ದೇನೆ. ಆದರೆ, ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ