ಕಾಂಗ್ರೆಸ್ ನಾಯಕರು ಕುರ್ಚಿ ಕಚ್ಚಾಟದಲ್ಲಿ ತೊಡಗಿದ್ದಾರೆ- ಈಶ್ವರಪ್ಪ

ಗುರುವಾರ, 2 ನವೆಂಬರ್ 2023 (15:23 IST)
ಬೆಂಗಳೂರು-ದೆಹಲಿಗೆ ಹೈಕಮಾಂಡ್ ಬುಲಾವ್ ವಿಚಾರವಾಗಿ ನಗರ ಬಿಜೆಪಿ ಕಛೇರಿಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.ಮೊನ್ನೆ ನನಗೆ ದೆಹಲಿ ಕಚೇರಿಯಿಂದ ಕರೆ ಬಂತು.ಎರಡನೇ ತಾರೀಖು ಬರುವಂತೆ ತಿಳಿಸಿದ್ರು.ನಾನು, ಪಿ ಸಿ ಮೋಹನ್, ಕೋಟಾ ಶ್ರೀನಿವಾಸ್ ಪೂಜಾರಿ ಗೆ ಬರುವುದಕ್ಕೆ ಹೇಳಿದ್ದಾರೆ.ಯಾವ ವಿಚಾರಕ್ಕೆ ಬರುವುದಕ್ಕೆ ಹೇಳಿದ್ದಾರೆ ಅಂತ ಗೊತ್ತಿಲ್ಲ.ಹೋದ ಮೇಲೆ ಗೊತ್ತಾಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.
 
ಕಾಂಗ್ರೆಸ್‌ನಲ್ಲಿ ಎರಡು ಗುಂಪು ಇದೆ.ಬರ, ರೈತರ ಬಗ್ಗೆ ತಲೆ ಕೆಡಿಸಿಕೊಳ್ತಿಲ್ಲ.ಮಾತೆತ್ತಿದರೆ ಕೇಂದ್ರ ಪರಿಹಾರ ಕೊಟ್ಟಿಲ್ಲ ಅಂತ ಹೇಳ್ತಾರೆ.ಆದ್ರೆ ಬರೀ ಕೇಂದ್ರದ ಮೇಲೆ ಆರೋಪ ಮಾಡ್ತಿದ್ದಾರೆ.ಒಬ್ಬ ಉಸ್ತುವಾರಿ ಸಚಿವ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ.ಪರಿಹಾರ ಕೊಡೋದಿರಲಿ, ರೈತರಿಗೆ ಕನಿಷ್ಟ ಸಾಂತ್ವನ ಹೇಳಿಲ್ಲ.ಇಂಥ ಭೀಕರ ಬರಗಾಲ ಹಿಂದೆ ಬಂದಿಲ್ಲ.ಕಾಂಗ್ರೆಸ್ ನಾಯಕರು ಕುರ್ಚಿ ಕಚ್ಚಾಟದಲ್ಲಿ ತೊಡಗಿದ್ದಾರೆ.ಅವರ ಗ್ಯಾರಂಟಿಗಳು ವಿಫಲ ಆಗಿವೆ.ಗ್ಯಾರಂಟಿಗಳು ಸಂಪೂರ್ಣ ಬಿದ್ದು ಹಾಳಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ