ಕೊರೊನಾ ಪಾಸಿಟಿವ್ ಬಂದರೂ ಸದನಕ್ಕೆ ಹಾಜರಾದ ಕಾಂಗ್ರೆಸ್ ಶಾಸಕ

ಶುಕ್ರವಾರ, 25 ಸೆಪ್ಟಂಬರ್ 2020 (10:39 IST)
ಬೆಂಗಳೂರು : ಕೊರೊನಾ ಪಾಸಿಟಿವ್ ಬಂದರೂ ಸದನಕ್ಕೆ ಹಾಜರಾಗುವುದರ ಮೂಲಕ  ಕಾಂಗ್ರೆಸ್ ಶಾಸಕರೊಬ್ಬರು ಬೇಜವಾಬ್ದಾರಿತನ ತೋರಿದ್ದಾರೆ.

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ತಮಗೆ ಕೊರೊನಾ ಪಾಸಿಟಿವ್ ಬಂದಿರುವುದಾಗಿ 3 ದಿನದ ಹಿಂದೆ ಟ್ವೀಟ್ ಮಾಡಿ ತಿಳಿಸಿದ್ದರು. ಆದರೆ ಪಾಸಿಟಿವ್ ಇದ್ರೂ ಸದನಕ್ಕೆ ಬಂದಿದ್ದಾರೆ. ಆ ಮೂಲಕ ಅವರು ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ಅವರು ತಮಗೆ 2 ಬಾರಿ ನೆಗೆಟಿವ್ ಬಂದಿದೆ. ಆದಕಾರಣ ಸದನಕ್ಕೆ ಹಾಜರಾಗಿರುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ