ದಲಿತರಿಗೆ ಸಿಎಂ ಕುರ್ಚಿ ಅನ್ನೋ ಚರ್ಚೆ ಬೇಡವೆಂದ ಸಂಸದ ಮಲ್ಲಿಕಾರ್ಜುನ ಖರ್ಗೆ
ಸೋಮವಾರ, 14 ಮೇ 2018 (08:17 IST)
ಕಲಬುರಗಿ : ಈಗಾಗಲೇ ಚುನಾವಣೆ ಮುಗಿದಿದ್ದು ಎಣಿಕೆ ಒಂದೇ ಬಾಕಿಉಳಿದಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಿ.ಎಂ ಆಗ್ತಾರೆ ಎನ್ನುವ ವಿಷಯದ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಸಿ.ಎಂ ಸಿದ್ದರಾಮಯ್ಯ ಹೈಕಮಾಂಡ್ ಆಕ್ಷೇಪಪಟ್ಟರೆ ನಾನು ಸಿ.ಎಂ ಸ್ಪರ್ಧೆ ಸ್ಥಾನದಿಂದ ಹಿಂದೆ ಹೋಗುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಇದೀಗ ಸಿಎಂ ಸ್ಥಾನಕ್ಕೆ ದಲಿತರ ಕೋಟಾದಿಂದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಮುನಿಯಪ್ಪ ಅವರ ಹೆಸರು ಜೋರಾಗಿ ಚರ್ಚೆಯಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು,’ ಸಿಎಂ ಪದವಿ ಕೊಟ್ಟರೆ ಕೊಡಲಿ. ಇಲ್ಲವಾದರೆ, ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತ ಎಂದು ಪರಿಗಣಿಸಿ ಹುದ್ದೆ ಕೊಟ್ಟರೆ ಕೊಡಲಿ. ಆದರೆ, ದಲಿತರಿಗೆ ಸಿಎಂ ಕುರ್ಚಿ ಅನ್ನೋ ಚರ್ಚೆ ಬೇಡ. ನಾನು ಯಾವತ್ತು ದಲಿತ ಸಿಎಂ ಎಂದು ಅರ್ಜಿ ಹಾಕಿಲ್ಲ, ಹಾಕುವುದೂ ಇಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ