ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿವಿ ಮೇಲೆ ಹೂ ಅಭಿಯಾನ
ನಿನ್ನೆ ಬಜೆಟ್ ಮಂಡನೆ ಸಂದರ್ಭದಲ್ಲಿ ಕಿವಿ ಮೇಲೆ ಚೆಂಡು ಹೂವನ್ನ ಕೈ ಶಾಸಕರು ಧರಿಸಿದರು.ಇಂದು ಬೆಳಿಗ್ಗಿನ ಜಾವ ಕಿವಿ ಮೇಲೆ ಹೂವ ಎಂಬ ಪೋಸ್ಟರ್ ಅಭಿಯಾನವನ್ನ ಕಾಂಗ್ರೆಸ್ ಬೆಂಗಳೂರು ಸೇರಿದಂತೆ ವಿವಿದ ಕಡೆ ಶುರು ಮಾಡಿದೆ.ಬಿಜೆಪಿಯೇ ಭರವಸೆ ಎಂದು ರಾಜ್ಯ ಬಿಜೆಪಿ ಪೋಸ್ಟರ್ ಅಂಟಿಸಿದೆ.ಅದೇ ಪೋಸ್ಟರ್ ಗಳ ಮೇಲೆ ಕಿಮ ಮೇಲೆ ಹೂವ ಎಂಬ ಪೋಸ್ಟರ್ ಅಂಟಿಸಲಾಗಿದೆ.ಭರವಸೆ, ಭರವಸೆ ಬುರುಡೆ ಭರವಸೆ ಎಂದು ವ್ಯಂಗ್ಯ ಮಾಡಿದ್ದಾರೆ.ಸಾಕಪ್ಪ ಸಾಕು ಕಿಮಿ ಮೇಲೆ ಹೂವ ಎಂದು ಪೋಸ್ಟರ್ ನಲ್ಲಿ ಉಲ್ಲೇಖ ಮಾಡಿ ಪೇ ಸಿಎಂ ಅಭಿಯಾನ ಬಳಿಕ ಕಿವಿ ಮೇಲೆ ಹೂವ ಅಭಿಯಾನವನ್ನ ಕಾಂಗ್ರೆಸ್ ಶುರುಮಾಡಿದೆ.