ವಿವಾದಕ್ಕೆ ಕಾಂಗ್ರೆಸ್ ಕುಮ್ಮಕ್ಕು ಕಾರಣ: ಈಶ್ವರಪ್ಪ
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶಕ್ಕೆ ನಾವು ಬೆಲೆ ಕೊಡುತ್ತೇವೆ. ದತ್ತಪೀಠದಲ್ಲಿ ಗೋರಿ ನಿರ್ಮಾಣ ಮಾಡಿ, ಅದಕ್ಕೆ ಬಾಬಾ ಬುಡನ್ಗಿರಿ ಎಂದು ಹೆಸರು ಹೇಳಿದರೆ ಆಗುತ್ತೇ? ದತ್ತಪೀಠ ಎಂಬ ಹೆಸರಿದ್ದು, ನ್ಯಾಯಾಲಯದ ಆದೇಶದಂತೆ ಅದು ದತ್ತಪೀಠವೇ ಆಗಿದೆ.
ಹೀಗಿರುವಾಗ ಕೆಲವು ಕಿಡಿಗೇಡಿಗಳು ಅಲ್ಲಿ ನಮಾಜ್ ಮಾಡಿ, ಮಾಂಸಾಹಾರ ಸೇವಿಸಿದ್ದಾರೆ ಅಂದರೆ ಅವರಿಗೆ ಇನ್ನೆಷ್ಟು ಸೊಕ್ಕು ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.