ಕಾಂಗ್ರೆಸ್ 40 ಸೀಟು ಮೇಲೆ ಒಂದೇ ಒಂದು ಸೀಟು ಹೆಚ್ಚು ಗೆಲ್ಲೋದಿಲ್ಲ: ಕಾರಜೋಳ
ಇಂದಿನಿಂದ ಕಾಂಗ್ರೆಸ್ ನಾಯಕರ ಬಸ್ ಯಾತ್ರೆ ಬೆಳಗಾವಿಯಿಂದ ಪ್ರಾರಂಭ ಆಗುತ್ತಿರೋದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ನವರು ವ್ಯರ್ಥ ಕಸರತ್ತು ಮಾಡ್ತಿದ್ದಾರೆ. ಅವರ ಪ್ರಮುಖ ನಾಯಕ ರಾಹುಲ್ ಗಾಂಧಿಯವರೇ ಸ್ವತಃ ಕ್ಷೇತ್ರದಲ್ಲಿ ಸೋತು.
ಕೇರಳಕ್ಕೆ ಓಡಿ ಹೋಗಿ ನಿಂತಿದ್ದಾರೆ. ಮೈಸೂರಿನಲ್ಲಿ ಬೆಳೆದ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ನಿಂತು ಕಡಿಮೆ ಅಂತರದಲ್ಲಿ ಗೆದ್ದಿದ್ದರು. ಈಗ ಬಾದಾಮಿಯಿಂದ ಪಲಾಯನ ಮಾಡಿ ಕೋಲಾರಕ್ಕೆ ಹೋಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.