ಇಂದು ಡಾಕ್ಟರ್ ಬಾಬಾ ಸಾಹೇಬ್ ಅವರ ಪರಿ ನಿರ್ವಹಣಾ ದಿನ. ಇಡೀ ದೇಶದ ಬಹಳ ಗೌರವದಿಂದ ಆಚರಣೆಯನ್ನು ಮಾಡ್ತಾರೆ. ಇಂದು ನಾನು ಅವರಿಗೇ ಪುಷ್ಪ ನಮನವನ್ನು ಸಲ್ಲಿಸಿದ್ದೀವಿ. ಅವರು ದೇಶ ಕಂಡ ಅಪ್ರತಿಮ ಮೇಧಾವಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೋಷಿತ ವರ್ಗಗಳ ಜನ ಅನುಭವಿಸಿದ್ದನ್ನು ಯಾರು ಅನುಭವಿಸಬಾರದು ಎಂದು ಅಂಬೇಡ್ಕರ್ ಹೋರಾಡಿದರು. ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನ ಪ್ರಂಪಂಚದಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ. ಅವರು ಅತ್ಯಂತ ಅವಶ್ಯಕ ಸಂವಿಧಾನವನ್ನು ರಚನೆ ಮಾಡಿದ್ರು ಎಂದು ಅವರು ಹೇಳಿದ್ರು. BJP ಸರ್ಕಾರ ಒಂದು ಕಡೆ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡ್ತಾರೆ.ಇನ್ನೊಂದು ಕಡೆ ದಲಿತರಿಗೆ ವಂಚನೆ ಮಾಡ್ತಾರೆ ಎಂದು BJP ವಿರುದ್ಧ ಗುಡುಗಿದರು. ಅಂಬೇಡ್ಕರ್ ಸಂವಿಧಾನ ಇರಲಿಲ್ಲ ಅಂದ್ರೆ ನಾನು ಸಿಎಂ ಆಗುತ್ತಿರಲಿಲ್ಲ, ನರೇಂದ್ರ ಮೋದಿ ಅವರು ಇವತ್ತು ಪ್ರಧಾನಿ ಆಗುತ್ತಿರಲಿಲ್ಲ. ಆದರಿಂದ ನಾವು ಸಂವಿಧಾನವನ್ನ ರಕ್ಷಣೆ ಮಾಡ್ಬೇಕು ಎಂದು ತಿಳಿಸಿದರು.