2024ರೊಳಗೆ ರಾಮಮಂದಿರ ನಿರ್ಮಾಣ

ಶನಿವಾರ, 15 ಅಕ್ಟೋಬರ್ 2022 (15:26 IST)
ಅನಿವಾಸಿ ಗುಜರಾತಿಗಳು ತಾವು ವಾಸಿಸುವ ಪ್ರತಿಯೊಂದು ದೇಶದ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತಾರೆ. ಗುಜರಾತ್​ನ ಸರ್ವತೋಮುಖ ಅಭಿವೃದ್ಧಿಗೆ ಗುಜರಾತ್​ನ ಬಿಜೆಪಿ ಸರ್ಕಾರ ಸಾಕಷ್ಟು ಪರಿಶ್ರಮ ವಹಿಸುತ್ತಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ ಅಭಿವೃದ್ಧಿ ಪರ್ವ ಮುಂದುವರಿದಿದೆ. ಮುಂದಿನ 25 ವರ್ಷಗಳ ಕಾಲ ಸಂಕಲ್ಪ ಮಾಡುವ ಸಮಯವಿದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗುಜರಾತ್​ನ ಅಹಮದಾಬಾದ್​​ನಲ್ಲಿ ಮೂರು ದಿನಗಳ ‘ಪ್ರವಾಸಿ ಗುಜರಾತಿ ಪರ್ವಇಂದಿನಿಂದ ಆರಂಭವಾಗಿದೆ. ಈ ಉತ್ಸವಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ಕಟ್ಟುವ ವಿಚಾರದಲ್ಲಿ ವಿರೋಧ ಪಕ್ಷಗಳು ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದವು ಎಂದು ವಾಗ್ದಾಳಿ ನಡೆಸಿದ ಅಮಿತ್ ಶಾ, ‘ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವ ಬಗ್ಗೆ ನಮ್ಮ ವಿರೋಧಿಗಳು ನಮ್ಮನ್ನು ಹೀಯಾಳಿಸುತ್ತಿದ್ದರು. ರಾಮ ಮಂದಿರವನ್ನು ಅಲ್ಲಿಯೇ ಕಟ್ಟುತ್ತೇವೆ, ಆದರೆ ಯಾವಾಗ ಕಟ್ಟುತ್ತೇವೆ ಎಂದು ಹೇಳುವುದಿಲ್ಲ ಎಂದು ಹೇಳುತ್ತಾ ನಮ್ಮನ್ನು ಟೀಕಿಸುತ್ತಿದ್ದರು. ಆದರೆ, ನಮ್ಮ ನಾಯಕ ನರೇಂದ್ರ ಮೋದಿ ಅವರು ದೊಡ್ಡ ಕಾರ್ಯಗಳನ್ನು ಹೇಗೆ ಸಾಧಿಸಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ. ಅವರು ಶಾಂತಿಯುತ ರೀತಿಯಲ್ಲಿ ಮಾತ್ರವಲ್ಲದೆ ಸಂವಿಧಾನದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ರಾಮ ಮಂದಿರವನ್ನು ನಿರ್ಮಿಸುವ ಅಸಾಧ್ಯವಾದ ಕೆಲಸವನ್ನು ಮಾಡಿದ್ದಾರೆ.  2024ರ ಚುನಾವಣೆಗೂ ಮೊದಲು ಅಯೋಧ್ಯೆಯಲ್ಲಿ ಆಕಾಶದ ಎತ್ತರದ ರಾಮ ಮಂದಿರವು ಸಿದ್ಧವಾಗಲಿದೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ