ಕಳೆದ ಮೂರ್ನಾಲ್ಕು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆ ಬಂದ್ರೆ ಸಾಕು ಬೆಂಗಳೂರಿನಲ್ಲಿ ರಸ್ತೆಗಳೆಲ್ಲಾ ಕೆರೆಯಂತಾಗಿತ್ತೆ. ಇನ್ನು ದೇಶದ ನಂಬರ್ 1 ಸಾರಿಗೆ ಸಂಸ್ಥೆ ಎಂದು ಹೆಸರುವಾಗಿಯಾಗಿರುವ BMTC ಅವ್ಯವಸ್ಥೆಯ ಆಗರವಾಗಿದೆ. ಯಾಕಂದ್ರೆ ಶಿವಾಜಿನಗರದಿಂದ ಕೆ.ಆರ್.ಮಾರುಕಟ್ಟೆಗೆ ಹೋಗ್ತಿದ್ದ ಬಸ್‌ನಲ್ಲಿ ಪ್ರಯಾಣಿಕರು ನೆನೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಒಳಗೆ ಸೀಟ್ ಇದ್ರೂ ಪ್ರಯಾಣಿಕರಿಗಿಲ್ಲ ಕುಳಿತುಕೊಳ್ಳುವ ಭಾಗ್ಯ.ಬಸ್ ಒಳಗೂ ಕೊಡೆ ಹಿಡಿದು, ರೈನ್ ಕೋಟ್ ಹಾಕೊಂಡೆ ಕುಳಿತು ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಎಂಟಿಸಿಯಲ್ಲಿ ನೂರಾರು ಬಸ್‌ಗಳನ್ನ ಸರಿಯಾಗಿ ನಿರ್ವಹಣೆ ಮಾಡದೇ ಇರುವುದೇ ಇವತ್ತಿನ ಪರಿಸ್ಥಿತಿಗೆ ಕಾರಣವಾಗಿದೆ.