ಜನರ ನೆಮ್ಮದಿ ಕೆಡಿಸಿದ್ದಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿಯ ಕೈಗೆ ಗಾಯ ಮಾಡಿದ್ದ ಹುಲಿಯನ್ನು ಹಿಡಿಯುವ ಕಾರ್ಯಾಚರಣೆ 4ನೇ ದಿನವೂ ಮುಂದುವರಿದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲ್ಲೀಗೌಡನಹಳ್ಳಿಯ ಸುತ್ತಮುತ್ತ ಕಳೆದ ಎರಡು ಮೂರು ದಿನಗಳಿಂದ ಕಾಡಂಚಿನ ಗ್ರಾಮದಲ್ಲಿ ಹುಲಿಯೊಂದು ಕಾಣಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ದಾಳಿ ಮಾಡಿ ಕೈಗೆ ಗಾಯಮಾಡಿತ್ತು.
ಇದಾದ ನಂತರ ಅರಣ್ಯ ಇಲಾಖೆಯು ಸಹ ಕಾರ್ಯಚರಣೆ ಮಾಡಿ ಶನಿವಾರ ಸಂಜೆ ಹುಲಿಯನ್ನ ಕಾಡಿಗೆ ಅಟ್ಟಲಾಗಿತ್ತು. ಆದರೆ ಭಾನುವಾರ ಮತ್ತೆ ಹುಲಿರಾಯ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಹಾಗೂ ಸೋಮವಾರ ಬಂಡೀಪುರದ ಆನೆ ಜಯಪ್ರಕಾಶ್, ನಾಗರಹೊಳೆಯ ಆನೆ ಅಭಿಮನ್ಯು, ಕೃಷ್ಣ ಎಂಬ ಮೂರು ಆನೆಗಳನ್ನು ಬಳಸಿಕೊಂಡು ಹುಲಿ ಕಾರ್ಯಚರಣೆಯನ್ನು ಕೈಗೊಳ್ಳಲಾಗಿದೆ. ನಾಲ್ಕನೇ ದಿನವೂ ಹುಲಿ ಸಿಗದೆ ಅರಣ್ಯ ಇಲಾಖೆಯ ಸಿಬ್ಬಂದಿ ವಾಪಸ್ ತೆರಳಿದ್ದಾರೆ.