ಮಡಿಕೇರಿಯಲ್ಲಿ ಪರಿವರ್ತನಾ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಆಯೋಜನೆ ಮಾಡಿದ್ದ ಸಾಮಾಜಿಕ ಸಮರಸತಾ ಸಮಾವೇಶ, ಹಿಂದೂ ಐಕ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು,’ ಜಾತಿ ವಿಷಬೀಜ ಸಮಾಜದಲ್ಲಿ ಸೇರಿಕೊಂಡ ಬಳಿಕ ನಾವು ನಿರ್ಮಾಣ ಮಾಡಿದ್ದನ್ನು ನಮ್ಮದು ಎಂದು ಹೇಳಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಹಿಂದೂಗಳು ಒಗ್ಗಟ್ಟಾಗಿ ನಿಲ್ಲದೇ ಇದ್ದರೆ ಏನಾಗುತ್ತದೆ ಎಂಬುವುದನ್ನು ಇತಿಹಾಸ ನೋಡಿದರೆ ನಮಗೆ ಅರಿವಾಗುತ್ತದೆ’ ಎಂದು ತಿಳಿಸಿದ್ದಾರೆ.
‘ಇತಿಹಾಸ ಬರೆಯಲು ಮುಂದಾಗಬೇಕು. ಪೌರುಷ ಇದ್ದರೆ ಇತಿಹಾಸ ಬರೆಯಿರಿ. ದೇವರಿಗೆ ದುರ್ಬಲರೇ ಬೇಕಾಗಿದ್ದು, ಅದ್ದಕ್ಕೆ ಕುರಿ-ಕೋಳಿ ಬಲಿ ಕೊಡಲಾಗುತ್ತದೆ. ಆನೆ ಹುಲಿಯನ್ನು ದೇವರಿಗೆ ಬಲಿಕೊಡ್ತಾರಾ? ಆದ್ದರಿಂದ ದುರ್ಬಲರಾಗದೇ ಶೌರ್ಯ ವ್ಯಕ್ತಿಗಳಾಗಿ ಬೆಳೆಯಿರಿ. ಹಿಂದೂ ಸಮಾಜ ಒಟ್ಟಾಗಿ ನಿಲ್ಲದೇ ಇದ್ದರೆ ಮುಂದೆ ಕಷ್ಟವಾಗುತ್ತದೆ’ ಎಂದು ಹಿಂದೂ ಸಂಘಟನೆ ಹಾಗೂ ಪ್ರಸಕ್ತ ಸಮಾಜದಲ್ಲಿ ಯುವಕರಿಗೆ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ