ಕುರಿ ಸಂತೆಗಾಗಿ ಹಳ್ಳಿಗಳ ನಡುವೆ ಮುಂದುವರಿದ ಗಲಾಟೆ!

ಶುಕ್ರವಾರ, 3 ಆಗಸ್ಟ್ 2018 (14:17 IST)
ತಮ್ಮ ಗ್ರಾಮದಲ್ಲಿಯೇ ಕುರಿ ಸಂತೆ ನಡೆಸುವಂತೆ ಆ ಎರಡೂ ಗ್ರಾಮಗಳ ಜನರ ನಡುವೆ ವಾಗ್ವಾದ ಮುಂದುವರಿದಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಆಗಾಗ್ಗೆ ಗಲಾಟೆ, ವಾಗ್ವಾದಗಳು ಮುಂದುವರಿಯುತ್ತಲೇ ಇವೆ. 

ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಹಾಗೂ ಬೂದಗುಂಪಾ ಗ್ರಾಮಸ್ಥರ ನಡುವೆ ವಾಗ್ವಾದ ಮತ್ತೆ ನಡೆದಿದೆ.
ಕುರಿ ಮಾರಾಟ ಸಂತೆಯನ್ನು ಮೊದಲು ನಡೆಯುತ್ತಿದ್ದ ಕೂಕನಪಳ್ಳಿ ಗ್ರಾಮದಲ್ಲಿಯೇ ಮಾಡುವಂತೆ ಒತ್ತಾಯ ಕೇಳಿಬಂದಿದೆ. ಕಳೆದ ಮೂರು ವರ್ಷಗಳ ಹಿಂದೆ ಎರಡು ಗ್ರಾಮಸ್ಥರ ನಡುವೆ ಇದೇ ವಿಷಯವಾಗಿ ಗಲಾಟೆ ನಡೆದಿತ್ತು.  

ತಿಂಗಳುವರೆಗೆ ಗಲಾಟೆ ನಡೆದು, ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು. ಈ ಸಧ್ಯ ಬೂದಗುಂಪಾ ಗ್ರಾಮದಲ್ಲಿ ಸಂತೆ  ನಡೆಯುತ್ತಿದೆ. ಎರಡು ಗ್ರಾಮಸ್ಥರ ನಡುವೆ ವ್ಯಾಪಾರಿಗಳು ಹಾಗೂ ಕುರಿಗಾರರಿಗೆ ತೊಂದರೆಯಾಗುತ್ತಿದೆ ಎಂದು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದರೆ, ನಮ್ಮ ಊರಿನಲ್ಲಿ ಕುರಿ ಸಂತೆ ನಡೆಯಬೇಕೆಂದು ಕೂಕನಪಳ್ಳಿ ಮತ್ತು ಬೂದಗುಂಪಾ ಗ್ರಾಮಸ್ಥರು ಪಟ್ಟು ಹಿಡಿದಿರುವುದು ವಾಗ್ವಾದಕ್ಕೆ ಮೂಲವಾಗಿದ್ದು, ಮತ್ತೆ ಗಲಾಟೆ ಮುಂದುವರಿಯುವ ಲಕ್ಷಣಗಳು ಗೋಚರಿಸಿವೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ