ಜೆಡಿಎಸ್ ಎಂಎಲ್ ಎಗೆ ತರಾಟೆ ತೆಗೆದುಕೊಂಡ ಗ್ರಾಮಸ್ಥರು

ಭಾನುವಾರ, 29 ಜುಲೈ 2018 (15:48 IST)
ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಬರುತ್ತಲೇ ಜೆಡಿಎಸ್ ಎಂ.ಎಲ್. ಯನ್ನು  ಗ್ರಾಮಸ್ಥರೇ ತರಾಟೆ ತೆಗೆದುಕೊಂಡು ವಾಪಸ್ ಕಳುಹಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.  ಗ್ರಾಮಸ್ಥರು ಶಾಸಕರನ್ನು ತರಾಟೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ರೀರಂಗಪಟ್ಟಣ ವಿಧಾನಸಭಾ  ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ, ಅಧಿಕಾರಿಗಳೊಂದಿಗೆ ಕಿರಗದೂಂರು ಭೇಟಿ ನೀಡಲು ಬರುತ್ತಿದ್ದರು. ವಿಷಯ ತಿಳಿದ ಗ್ರಾಮದ ಕೆಲವು ಜೆಡಿಎಸ್ ಕಾರ್ಯಕರ್ತರು ಮೈಸೂರು- ಬೆಂಗಳೂರು ಹೆದ್ದಾರಿ ಬಳಿಯೇ ಶಾಸಕರನ್ನ ತಡೆದು ಗ್ರಾಮಕ್ಕೆ ಬರದಂತೆ ತಡೆಯುತ್ತಾರೆ. ಮಾಹಿತಿ ನೀಡದೇ ಗ್ರಾಮಕ್ಕೆ ಬರ್ತಿರೋದು ಸರಿಯಲ್ಲ. ಈಗ ಗ್ರಾಮದಲ್ಲಿ ಮುಖಂಡರು ಇಲ್ಲ. ಮುಂದೆ ನೀವೇ ದಿನಾಂಕ ನಿಗದಿ ಮಾಡಿ, ಐದು ಲಕ್ಷ ಖರ್ಚು ಮಾಡಿ ನಾವೇ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡ್ತೀವಿ ಎಂದಿದ್ದಾರೆ.

ವೇಳೆ  ಜೆಡಿಎಸ್ ಕಾರ್ಯಕರ್ತರನ್ನ ಸಮಾಧಾನ ಮಾಡಲು ಮುಂದಾದ್ರೂ ಕೇಳದಿದ್ದಾಗ, ಕಕ್ಕಾಬಿಕ್ಕಿಯಾದ ಶಾಸಕ ರವೀಂದ್ರ ಶ್ರೀಕಂಠಯ್ಯ, ಮನೋಹರ್ ಎಂಬಾತನ ಮೇಲೆ ಸಿಟ್ಟಿಗೆದ್ದು, ನಿನ್ನ ಯೋಗ್ಯತೆ ಏನು ಅಂತ ತೋರಿಸಿದೆ. ಸಾರ್ವಜನಿಕ್ರು ಮತ ಹಾಕಿದ್ದಾರೆ. ಲೋ ನಾನು ರಾಜಕೀಯ ನೋಡಿದ್ದೀನಿ, ನಿಮಗೆ ಹೆದರಿ ಹೋಗ್ತಿಲ್ಲ, ನೀನು ನನ್ನ ಅಡ್ಡಗಟ್ಟಿ ಅವಮಾನ ಮಾಡಿದ್ದೀರಿ ಎಂದು ವಾಪಸ್ಸು ತೆರಳುತ್ತಾರೆ. ಅಲ್ಲೇ ಇದ್ದ ಗ್ರಾಮಸ್ಥರೊಬ್ಬರು ಘಟನೆಯನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳು ವೈರಲ್ ಆಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ