ಕುಗ್ರಾಮಕ್ಕೆ ಬಸ್ ಬಂತು ಬಸ್; ಜನರು ಫುಲ್ ಖುಷ್

ಶುಕ್ರವಾರ, 20 ಜುಲೈ 2018 (17:19 IST)
ದಶಕಗಳ ನಂತರ ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿ ಬಂದಿದ್ದು, ಜನ ಸದ್ಯ ಬಸ್ ಸೌಲಭ್ಯ ಸಿಕ್ಕ ಕಾರಣ ಹರ್ಷ ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಮೋತಿಕಲ್ ತಾಂಡಾ ಗ್ರಾಮವು ತಾಲೂಕು ಕೇಂದ್ರ ಕೊಟ್ಟೂರಿನಿಂದ ಕೇವಲ 5 ಕಿ.ಮೀ. ಇದೆ. ಹೀಗೆ ಅಣತಿ ದೂರದಲ್ಲಿ ಇದ್ದರೂ ಗ್ರಾಮಕ್ಕೆ ದಶಕಗಳಿಂದ ಬಸ್ ಸೌಲಭ್ಯವೇ ಇರಲಿಲ್ಲ. ಶಾಲಾ, ಕಾಲೇಜ್ ಮಕ್ಕಳು, ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ತಾಂಡಾದಿಂದ ಕೊಟ್ಟೂರು ಪಟ್ಟಣಕ್ಕೆ ಹೋಗಬೇಕಾದರೆ, ಖಾಸಗಿ ವಾಹನಗಳನ್ನು ಅವಲಂಬಿಸಿಯೇ ಇದ್ದರು. 250 ವಿದ್ಯಾರ್ಥಿಗಳು ಗ್ರಾಮ ಸೇರಿದಂತೆ ಪಕ್ಕದ ಹಳ್ಳಿಗಳಿಂದ ಕೊಟ್ಟೂರು ಪಟ್ಟಣಕ್ಕೆ ಹಣ ಕೊಟ್ಟು ಆಟಗಳಲ್ಲಿ ಓಡಾಡಬೇಕಾದ ಅನಿವಾರ್ಯತೆ ಇತ್ತು.

ಗ್ರಾಮದ ಹಿರಿಯರು, ಸ್ಥಳೀಯ ಕನ್ನಡ ಪರ ಸಂಘಟನೆಗಳ ಜತೆಗೂಡಿ ಬಸ್ ವ್ಯವಸ್ಥೆ ಬೇಕೆಂದು  ಮನವಿ ಮಾಡಿದ್ದರು. ರಾಜ್ಯ ಸಾರಿಗೆ ಇಲಾಖೆ ಮನವಿಗೆ ಸ್ಪಂದಿಸಿದೆ. ಬಸ್ ವ್ಯವಸ್ಥೆ ಕಲ್ಪಿಸಿದ್ದು, ಸದ್ಯ ಮೋತಿಕಲ್ ತಾಂಡ ಹಾಗೂ ಲೋಟ್ಟನಕೇರೆ ಗ್ರಾಮದ ಜನರು ಸಾರಿಗೆ ಇಲಾಖೆಗೆ ಜೈ ಅಂದಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ