'ಮಹಾನಾಯಕ'ನನ್ನು ನಿಯಂತ್ರಿಸಿ, ಇಲ್ಲದಿದ್ದರೆ ನಿಮ್ಮ ವಿಡಿಯೋ ಹೊರಬರಬಹುದೆಂದು ಸಿಎಂಗೆ ಎಚ್ಚರಿಕೆ ನೀಡಿದ ಜಾರಕಿಹೊಳಿ

Sampriya

ಮಂಗಳವಾರ, 7 ಮೇ 2024 (14:25 IST)
Photo Courtesy X
ಬೆಳಗಾವಿ:  ಇಂದಲ್ಲ ನಾಳೆ ಪ್ರಜ್ವಲ್ ರೇವಣ್ಣ ಅವರಂತೆಯೇ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರ ವಿಡಿಯೋಗಳು ಹೊರಬರುವ ಸಾಧ್ಯತೆಯಿದ್ದು, ಅವರಿಗೆ ಈ ಬಗ್ಗೆ ನಾನು ಸೂಚನೆಯನ್ನು ಕೊಡುತ್ತಿದ್ದೇನೆ. ಆ ವಿಡಿಯೋಗಳನ್ನು ಹೊರತರುವ ಆ ಮಹಾನಾಯಕನನ್ನು ತಡೆಯಿರಿ ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.

ಇಂದು ಮತದಾನ ನಂತರ ಮಾತನಾಡಿದ ಅವರು , 'ನನ್ನ ಖಾಸಗಿ ವಿಡಿಯೊಗಳು ಹೊರಗೆ ಬಂದಾಗಲೇ ಈ ಬಗ್ಗೆ ಎಚ್ಚರಿಕೆ ಕೊಟ್ಟಿದ್ದೆ. ವಿಡಿಯೋ ಲೀಕ್ ಮಾಡಿದ ಆ ವ್ಯಕ್ತಿ ಮಹಾನಾಯಕ ಬಹಳ ಪ್ರಭಾವಿ, ಹಣವಂತೆ ಎಂದು ಹೇಳಿದ್ದು. ಆತ ಏನು ಬೇಕಾದರು ಮಾಡಬಲ್ಲವನಾಗಿದ್ದು, ಅವನಿಗೆ ಇತಿಶ್ರೀ ಹಾಡಬೇಕೆಂದರು.

ಇದೀಗ ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಪ್ರಕರಣದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಕೈವಾಡವಿದೆ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಪ್ರಕರಣದಲ್ಲಿ ಡಿಕೆಶಿ ಅವರದ್ದು ನೇರ ಕೈವಾಡವಿದ್ದು, ಈ ಬಗ್ಗೆ ಎಲ್ಲ ಪುರಾವೆಗಳು ನನ್ನಲಿದೆ ಎಂದು ಆರೋಪ ಮಾಡಿದರು.

ಇನ್ನೂ ಈ ವಿಡಿಯೋ ಪ್ರಕರಣಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷ ನೋಡದೆಯೇ ಕೊನೆಹಾಡಿ ಎಂದು ಕೇಳಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ