ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೆಟಿಎಸ್ ಮನೆಗೆ ಭದ್ರತೆ
ಸುಮಲತಾ ಅಂಬರೀಶ್ ಬಗ್ಗೆ ನೀಡಿರುವ ಹೇಳಿಕೆ ವಿವಾದ ಆಗುತ್ತಿದ್ದಂತೆ ಕೆಟಿಎಸ್ ಮನೆಗೆ ಭದ್ರತೆ ಒದಗಿಸಲಾಗಿದೆ.
ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನ ಕೆಟಿಎಸ್ ನೀಡಿದ್ದರು, ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯರಾಗಿರುವ ಕೆ.ಟಿ.ಶ್ರೀಕಂಠೇಗೌಡ ಅವರ ಮಂಡ್ಯದ ಸುಭಾಷ್ ನಗರದಲ್ಲಿರುವ ನಿವಾಸಕ್ಕೆ ಭದ್ರತೆ ಕಲ್ಪಿಸಲಾಗಿದೆ.
ಮನೆ ಮುಂಭಾಗ ಬ್ಯಾರಿಕೇಡ್ ಹಾಕಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ.
ಕೆಟಿಎಸ್ ವಿರುದ್ಧ ಪ್ರತಿಭಟನೆಗಳು ಶುರುವಾಗಿವೆ. ಕೆಟಿಎಸ್ ಮನೆ ಎದುರು ಪ್ರತಿಭಟನೆಗೆ ಅಂಬಿ ಅಭಿಮಾನಿಗಳು ಮುಂದಾಗಿದ್ದರು.
ಸಾಮಾಜಿಕ ಜಾಲ ತಾಣದಲ್ಲೂ ಕೆಟಿಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸುಮಲತಾ ಮಂಡ್ಯದ ಗೌಡ್ತಿಯೇ ಅಲ್ಲ ಎಂದು ಶ್ರೀಕಂಠೇಗೌಡ ನೀಡಿರುವ ಹೇಳಿಕೆ ಈಗ ವಿವಾದ ಹುಟ್ಟುಹಾಕಿದೆ.