ಸುಮಲತಾ ಅಂಬರೀಶ್ ಕಣಕ್ಕಿಳಿಸಲು ಮುಂದುವರಿದ ಯತ್ನ 
 
	
		
			 
										    		ಗುರುವಾರ,  31 ಜನವರಿ 2019 (20:04 IST) 
	    		     
	 
 
				
											ಲೋಕಸಭಾ  ಕ್ಷೇತ್ರದಲ್ಲಿ  ದೋಸ್ತಿಗೆ  ಸೆಡ್ಡು  ಹೊಡೆಯಲು  ಕಾಂಗ್ರೆಸ್  ಪ್ಲಾನ್  ಮಾಡಿದೆ .  ಸುಮಲತಾ  ಅಂಬರೀಶ್  ರನ್ನ  ಕಣಕ್ಕಿಳಿಸುವಂತೆ  ಜಿಲ್ಲಾ  ಮುಖಂಡರು  ಇನ್ನಿಲ್ಲದ  ಪ್ರಯತ್ನ  ಪಡುತ್ತಿದ್ದಾರೆ . 
									
				
											ಹೀಗಾಗಿ  ಕಾಂಗ್ರೆಸ್  ಕಾರ್ಯಕರ್ತರು  ನಿರಂತರವಾಗಿ  ಸುಮಲತಾ  ಅಂಬರೀಶ್  ಮೇಲೆ  ಒತ್ತಡ  ತರುತ್ತಿದ್ದಾರೆ .  ನಿತ್ಯ  ಬೆಂಗಳೂರಿನಲ್ಲಿರುವ  ಅಂಬರೀಶ್  ನಿವಾಸಕ್ಕೆ  ಆಗಮಿಸುತ್ತಿರುವ  ಕೈ  ಕಾರ್ಯಕರ್ತರು  ಸುಮಲತಾ  ಅವರ  ಮನವೊಲಿಕೆಗೆ  ಇನ್ನಿಲ್ಲದ  ಪ್ರಯತ್ನ  ಮಾಡುತ್ತಿದ್ದಾರೆ . 
									
				
											ಈ  ಬಗ್ಗೆ  ಪ್ರತಿಕ್ರಿಯೆ  ನೀಡಿರುವ  ಸುಮಲತಾ  ಅಂಬರೀಶ್ ,  ಅಂಬರೀಶ್  ಕಾಂಗ್ರೆಸ್  ನಿಂದ  ಗುರುತಿಸಿಕೊಂಡವರು .  ಹಲವು  ವರ್ಷ  ಕಾಂಗ್ರೆಸ್  ನಲ್ಲೇ  ಇದ್ದವರು .  ಹಾಗಾಗಿ  ನಾನೂ  ಕೂಡ  ಕಾಂಗ್ರೆಸ್  ಪರವಾಗಿ  ಇರಬೇಕಾಗುತ್ತದೆ .  ಅಲ್ಲದೇ  ಬಂಡಾಯ  ಅಭ್ಯರ್ಥಿಯಾಗಿ  ನಿಲ್ಲುವಷ್ಟೆಲ್ಲ  ನಾನು  ಬೆಳೆದಿಲ್ಲ .  ಅಂಬರೀಶ್  ಅವರ  ಮೇಲಿನ  ಅಭಿಮಾನದಿಂದ  ಸ್ಪರ್ಧಿಸುವಂತೆ  ಕೈ  ಕಾರ್ಯಕರ್ತರು  ಒತ್ತಾಯ  ಮಾಡುತ್ತಿದ್ದಾರೆ . 
									
				
											ಮಂಡ್ಯ  ಕ್ಷೇತ್ರದ  ಪ್ರತಿ  ತಾಲ್ಲೂಕು ,  ಬ್ಲಾಕ್  ಮಟ್ಟದ  ಕಾಂಗ್ರೆಸ್  ಕಾರ್ಯಕರ್ತರು  ಆಶಿಸುತ್ತಿದ್ದಾರೆ .  ಆದರೆ ,  ರಾಜಕೀಯದಲ್ಲಿ  ಮುಂದುವರಿಯಬೇಕೆ ..?  ಬೇಡವೇ ..?  ಎಂಬ  ಬಗ್ಗೆ  ಇನ್ನೂ  ನಾನು  ಸ್ಪಷ್ಟ  ನಿರ್ಧಾರ  ಮಾಡಿಲ್ಲ .  ಅಲ್ಲದೇ ,  ಚಿತ್ರರಂಗದಿಂದ  ನನ್ನ  ಯಾವುದೇ  ನಿರ್ಧಾರಕ್ಕೆ  ಸಂಪೂರ್ಣ  ಬೆಂಬಲ  ಸಿಗಲಿದೆ  ಅಂತಾ  ಅವರು  ವಿಶ್ವಾಸ  ವ್ಯಕ್ತಪಡಿಸಿದರು . 
									
				
											
									
  
	
	
   
	
   
		
		
		
						ಆ್ಯಪ್ನಲ್ಲಿ ವೀಕ್ಷಿಸಿ x