ತುಮಕೂರಿನಲ್ಲಿ ಕೊರೊನಾ ಅಬ್ಬರ; ಕೊರೊನಾ ಸೋಂಕಿಗೆ 20 ವರ್ಷದ ಯುವತಿ ಸಾವು

ಗುರುವಾರ, 29 ಏಪ್ರಿಲ್ 2021 (12:04 IST)
ತುಮಕೂರು : ತುಮಕೂರಿನಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದ್ದು, ಇದೀಗ 20 ವರ್ಷದ ಯುವತಿ ಸಾವನಪ್ಪಿದ್ದಾಳೆ.

ಕುಚ್ಚಂಗಿ ಗ್ರಾಮ ರೇಖಾ(20) ಕೊರೊನಾದಿಂದ ಸಾವನಪ್ಪಿದ ಯುವತಿ. ಯುವತಿ ಹಲವು ದಿನಗಳಿಂದ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಳು.

ತುಮಕೂರಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದ್ದ ಯುವತಿಗೆ ಕೊರೊನಾ ಸೋಂಕಿಗೆ ಒಳಗಾಗಿರುವುದು ತಿಳಿದುಬಂದಿದ್ದು,  ಯುವತಿ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಸಾವನಪ್ಪಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ