ಕೊರೊನಾ ಆರ್ಭಟಕ್ಕೆ ದೊಡ್ಡಬಳ್ಳಾಪುರ ವಿಲ ವಿಲ

ಶನಿವಾರ, 15 ಜನವರಿ 2022 (14:08 IST)
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ (covid) ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 123 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯ 42 ಶಿಕ್ಷಕರಿಗೆ ಕೊರೊನಾ (corona) ದೃಢಪಟ್ಟಿದೆ.
ಶಾಲೆಗಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ, ಸ್ಯಾನಿಟೈಸ್​ (Sanitize) ಮಾಡಿಸಲಾಗಿದ್ದು, ಹೆಚ್ಚು ಪ್ರಕರಣಗಳಿರುವ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
 
ದೊಡ್ಡಬಳ್ಳಾಪುರದಲ್ಲೂ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು, ರೋಗ ಲಕ್ಷಣವಿರುವ ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.
 
ಇನ್ನು ಬೆಳಗಾವಿಯ ಅಥಣಿ ತಾಲೂಕಿನ ಯಂಕಂಚಿಯಲ್ಲಿ ಪ್ರೌಢಶಾಲೆಯ 10 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದೆ. ಹತ್ತನೇ ತರಗತಿಯ ಸುಮಾರು 95 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ಆ ಪೈಕಿ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಅಂತಾ ಕ್ಷೇತ್ರ ಶಿಕ್ಷಣಾಧಿಕಾರಿ ಗೌಡಪ್ಪ ಖೋತಾ ಮಾಹಿತಿ ನೀಡಿದ್ದಾರೆ.
 
ಶಾಲೆಯ 35 ವಿದ್ಯಾರ್ಥಿಗಳ ಪರೀಕ್ಷಾ ವರದಿ ಬಾಕಿಯಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಸದ್ಯ ಸೋಂಕಿತರಲ್ಲಿ ಕಡಿಮೆ ರೋಗ ಲಕ್ಷಣಗಳಿದ್ದು, ಎಲ್ಲರನ್ನೂ ಹೋಮ್​ ಐಸೋಲೇಷನ್​ನಲ್ಲಿ ಇಡಲಾಗಿದೆ. ಇನ್ನು ಓರ್ವ ಶಿಕ್ಷಕರಿಗೂ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತಾ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ