ಕೊರೊನಾ ಭೀತಿ ಹಿನ್ನಲೆ; ಹೊಸ ವರ್ಷ ಆಚರಣೆಗೆ ಕಂಪ್ಲೀಟ್ ಬ್ರೇಕ್ ಹಾಕಿದ ಸರ್ಕಾರ
ಮಂಗಳವಾರ, 15 ಡಿಸೆಂಬರ್ 2020 (11:05 IST)
ಬೆಂಗಳೂರು: ಬೆಂಗಳೂರು ಜನತೆಗೆ ನ್ಯೂ ಇಯರ್ ಶಾಕ್. ಹೊಸ ವರ್ಷ ಆಚರಣೆಗೆ ಕಂಪ್ಲೀಟ್ ಬ್ರೇಕ್ ಹಾಕಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಕೊರೊನಾ 2ನೇ ಅಲೆ ಆತಂಕಕ್ಕೆ ಬೆಚ್ಚಿದ ಸರ್ಕಾರ, ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಹೊಸ ವರ್ಷಾಚರಣೆ ಮಾಡಿದ್ರೆ ದಂಡ ವಿಧಿಸಿ, ವರ್ಷಾಚರಣೆಗೆ ಬ್ರೇಕ್ ಹಾಕುವಂತೆ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ನೀಡಿದೆ.
ಹಾಗಾಗಿ ಈ ಬಗ್ಗೆ ಮಾರ್ಗಸೂಚಿ ಸಿದ್ದಪಡಿಸಲಿರುವ ಸರ್ಕಾರ ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಹಾಗೂ ದಂಡ ವಿಧಿಸುವುದು ಎನ್ನಲಾಗಿದೆ. ಅಲ್ಲದೇ ಜನ ಸೇರಿ ಸೆಲೆಬ್ರೇಷನ್ ಮಾಡುವ ಹಾಗೇ ಇಲ್ಲ ಎನ್ನಲಾಗಿದೆ.