ಪ್ರದೀಪ್ ಈಶ್ವರ್ ಎಚ್ಚರಿಕೆಯಿಂದ ಇರು ಮಗನೇ..: ಪ್ರತಾಪ್ ಸಿಂಹ ವಾರ್ನಿಂಗ್

Krishnaveni K

ಶುಕ್ರವಾರ, 24 ಅಕ್ಟೋಬರ್ 2025 (14:42 IST)

ಬೆಂಗಳೂರು: ಪ್ರದೀಪ್ ಈಶ್ವರ್ ಎಚ್ಚರಿಕೆಯಿಂದ ಇರು ಮಗನೇ ಎಂದು ಕಾಂಗ್ರೆಸ್ ಶಾಸಕರಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಪ್ರದೀಪ್ ಈಶ್ವರ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಪ್ರತಾಪ್ ಸಿಂಹ ಮುಳ್ಳಂದಿ ಮುಖದವನೇ ಕರ್ನಾಟಕದ ಏಕೈಕ ಕಾಮಿಡಿ ಪೀಸ್ ಎಂದರೆ ಅದು ನೀನೇ ಎಂದಿದ್ದಾರೆ. ಪ್ರದೀಪ್ ಈಶ್ವರ್ ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಬೆಳಗಲ್ಲ.

ಈವತ್ತು ರಾಜಕೀಯದಲ್ಲಿ ನೀಚ ಮಟ್ಟದಲ್ಲಿ ವೈಯಕ್ತಿಕ ನಿಂದನೆ ಮಾಡುವ ಮಟ್ಟದಲ್ಲಿ ನಾವಿದ್ದೇವೆ. ನನ್ನ ತಾಯಿ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಪ್ರದೀಪ್ ಈಶ್ವರ್ ಗೆ ಅವನದ್ದೇ ಭಾಷೆಯಲ್ಲಿ ಉತ್ತರಿಸುತ್ತೇನೆ.

ಪ್ರದೀಪ್ ಈಶ್ವರ್ ನೀನು ಕತ್ತಲಲ್ಲಿ ಕಾಣಲ್ಲ, ಬೆಳಕಲ್ಲಿ ಹೊಳೆಯಲ್ಲ. ಚಿಕ್ಕಬಳ್ಳಾಪುರದ ಗೌಡರುಗಳು ಈ ಹಿಂದೆ ಸುಧಾಕರ್ ಅವರ ಮೇಲಿದ್ದ ಒಂದು ಸಣ್ಣ ಬೇಸರದಿಂದ ನಿನ್ನನ್ನು ಗೆಲ್ಲಿಸಿದ್ರು. ಆದರೆ ಈ ಸಾರಿ ಗೌಡರು ಸೇರಿದಂತೆ ಎಲ್ಲರೂ ಸೇರಿ ನಿನ್ನ ಬಡಿದೋಡಿಸ್ತಾರೆ. ಆದರೆ ನೀನು ಮೊನ್ನೆ ನನ್ನ ಬಗ್ಗೆ, ನನ್ನ ತಾಯಿನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದ್ದಕ್ಕೆ ಕೊನೆಯ ಬಾರಿಗೆ ನಿನಗೆ ಉತ್ತರ ಕೊಡ್ತಾ ಇದ್ದೇನೆ.

ಮುಳ್ಳಂದಿ ಮುಖ ಇರುವ ಏಕೈಕ ಕಾಮಿಡಿ ಪೀಸ್ ನಿನ್ನಪ್ಪಂಗೆ ಮಾತ್ರ ಹುಟ್ಟಿರೋದಪ್ಪಾ. ಇನ್ಯಾರು ಅದಕ್ಕೆ ವಾರಸುದಾರರಿಲ್ಲ. ಆದರೆ ನಮ್ಮಪ್ಪ ಏನಾದರೂ ಅವರ ಸಣ್ಣ ವಯಸ್ಸಿನಲ್ಲಿ ಚಿಕ್ಕಬಳ್ಳಾಪುರ ಕಡೆ ಹೋಗಿದ್ರೆ ನೀನು ಸುಂದರವಾಗಿ ಹುಟ್ಟುತ್ತಿದೆ. ಇನ್ನೊಂದು ಸಾರಿ ವೈಯಕ್ತಿಕವಾಗಿ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು ಮಗನೇ. ಇದು ನಿನಗೆ ವಾರ್ನಿಂಗ್ ಕೊಟ್ಟು ಹೇಳ್ತಾ ಇದ್ದೇನೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ