ಗಣೇಶ ಹಬ್ಬಕ್ಕೆ ಮಾತ್ರ ರೂಲ್ಸಾ: ಯತ್ನಾಳ್ ವಿವಾದಾತ್ಮಕ ಕಿಡಿ
ಸರಕಾರಕ್ಕೆ ಗಣೇಶ ಹಬ್ಬ ಬಂದಾಗ ಮಾತ್ರ ಕೊರೊನಾ ಕಾಣಿಸುತ್ತದೆ. ಆದ್ದರಿಂದ ಜನರು ಬಿಂದಾಸ್ ಆಗ ಗಣೇಶನ ಹಬ್ಬ ಮಾಡಿ ಎಂದು ವಿಜಯಪುರ ದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾ
ಟೀಲ ಯತ್ನಾಳ ತಮ್ಮದೇ ಪಕ್ಷದ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಮೂರನೇ ಅಲೆಯ ಪರಿಣಾಮ ಜಿಲ್ಲೆಯ ಮೇಲೆ ಬೀರಲ್ಲ. ಈಗ ಪ್ರತಿದಿನ ಜಿಲ್ಲೆಯಲ್ಲಿ ಒಂದೇ ಪಾಸಿಟಿವ್ ಬರುತ್ತಿದೆ. ಆದರೂ ಶನಿವಾರ ರವಿವಾರ ಅಷ್ಟೇ ಕೊರೋನಾ ಬರತ್ತಾ? ತಜ್ಞರು ಯಾವ ಆಧರಾದ ಮೇಲೆ ವೈಜ್ಞಾನಿಕ ಮಾಹಿತಿ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ನಮ್ಮ ಜನ ಮಾಸ್ಕ ಹಾಕೊಕೊಳ್ಳದೇ ಒಡಾಡುತ್ತಿದ್ದಾರೆ ಎಂದರು.
ಗಣಪತಿ ಹಬ್ಬಕ್ಕೆ ಕಡಿವಾಣ ಹಾಕಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇಷ್ಟೇ ಇರಬೇಕು ಜನ, ಕೂಡಿಸುವಾಗ ಇಷ್ಟೇ ಜನ ಇರಬೇಕು ಇವೆಲ್ಲ ನಿಯಮ ಮಾಡಿದ್ದಾರೆ. ಇಂದು ಸಿಎಂ ಅವರಿಗೆ ನಾನು ಆಲಮಟ್ಟಿಯಲ್ಲಿ ಹೇಳಿದ್ದೇನೆ. ಇಂತಹ ಗೊಳ್ಳ ಕಾಯಿದೆಗಳಿಗೆ ನಾವೇನು ಕೇಳಲ್ಲ. ಎಸ್ ಪಿ ಹಾಗೂ ಡಿಸಿ ಅವರು ಬರೀ ಹಿಂದೂ ಹಬ್ಬದ ಮೇಲೆ ಕಾನೂನು ಮಾಡಿದರೆ ನಾವೇನು ಕೇಳಲ್ಲ ಎಂದು ಅವರು ಹೇಳಿದರು.
ಬಾಳ ಅಂದರ ನನಗೆ ಗುಂಡು ಹಾಕಬಹುದು. ನಾ ಸತ್ತರು ಹೆಸರು ತಗೊಂಡ ಸಾಯಬೇಕು. ಅದಕ್ಕ ಇವತ್ತು ಸಿಎಂ ಗೆ ಕೂಡಾ ಹೇಳಿದ್ದೇನೆ ಗಣೇಶೋತ್ಸವಕ್ಕೆ ತೊಂದರೆ ಮಾಡಬಾರದು ಎಂದು. 10-20 ಸಾವಿರ ಜನರನ್ನು ಸೇರಿಸಿ ಸಭೆ ಮಾಡುತ್ತಿದ್ದೀರ. ಗಣಪತಿ ಬಂದಾಗ ಮಾತ್ರ ಕೊರೋನಾ ನೆನಪಾಗತ್ತಾ? ಗಣೆಶೋತ್ಸವಕ್ಕೆ 50 ಜನ ಮಾತ್ರ ಇರಬೇಕು ಅಂತ ನಿಯಮ ಮಾಡಿದ್ದಿರ ಎಂದು ಅವರು ಪ್ರಶ್ನಿಸಿದರು.