ವೀಕೆಂಡ್ ಮೋಜು ಕೊರೋನಾಗೆ ಆಹ್ವಾನವಾಗದಿರಲಿ

ಭಾನುವಾರ, 11 ಜುಲೈ 2021 (12:20 IST)
ಬೆಂಗಳೂರು: ಕೊರೋನಾ ಎರಡನೇ ಅಲೆ ಮುಗಿದ ಬೆನ್ನಲ್ಲೇ ಜನ ಈಗ ಸಹಜ ಜೀವನಕ್ಕೆ ಮರಳಿದ್ದಾರೆ. ಆದರೆ ಇಷ್ಟು ದಿನ ಮನೆಯಲ್ಲೇ ಕೂತಿದ್ದ ಬೇಸರ ಕಳೆಯಲು ವೀಕೆಂಡ್ ಪ್ರವಾಸಗಳನ್ನು ಮತ್ತೆ ಶುರು ಮಾಡಿಕೊಂಡಿದ್ದಾರೆ.


ವೀಕೆಂಡ್ ಗಳಲ್ಲಿ ಮಾರ್ಕೆಟ್ ನಿಂದ ಹಿಡಿದು ಪ್ರವಾಸೀ ತಾಣದವರೆಗೂ ಜನವೋ ಜನವೋ. ಎಲ್ಲೆಂದರಲ್ಲಿ ಓಡಾಡುವುದಲ್ಲದೆ, ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ ಎಂಬಂತಾಗಿದೆ.

ಇದು ಮೂರನೇ ಅಲೆ ತೀವ್ರತೆಗೆ ಆಹ್ವಾನ ಕೊಟ್ಟಂತೆ. ಜನರೇ ಎಚ್ಚರಿಕೆ ಕಳೆದುಕೊಂಡು ಈಗ ಮೋಜು ಮಸ್ತಿಯಲ್ಲಿ ತೊಡಗಿ ಬಳಿಕ ಕೊರೋನಾ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರಗಳನ್ನು ದೂರಿ ಪ್ರಯೋಜನವಿಲ್ಲ. ತಜ್ಞರೂ ಇದನ್ನೇ ಹೇಳುತ್ತಿದ್ದಾರೆ. ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಈಗಿನ ಸಮಯ ಮಹತ್ವದ್ದು. ಈಗ ನಾವು ಎಚ್ಚರಿಕೆಯಿಂದಿದ್ದರೆ ಕೊರೋನಾ ಮೂರನೇ ಅಲೆ ತೀವ್ರವವಾಗದು. ಒಂದು ವೇಳೆ ಎಚ್ಚರಿಕೆ ಮರೆತರೆ ಮತ್ತೆ ಮುಂದಿನ ತಿಂಗಳಿನಿಂದ ಕೊರೋನಾ ಜಪ ಮಾಡಬೇಕಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ