ಕೊರೋನಾದಲ್ಲಿ ದೇಶದ ಅರ್ಧದಷ್ಟು ಕೊಡುಗೆ ಕೇರಳ, ಮಹಾರಾಷ್ಟ್ರದ್ದೇ!

ಶನಿವಾರ, 10 ಜುಲೈ 2021 (10:52 IST)
ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ಇನ್ನೂ ಕೆಲವು ರಾಜ್ಯಗಳಲ್ಲಿ ಕಡಿಮೆಯಾಗಿಲ್ಲ. ಇದೀಗ ಆರೋಗ್ಯ ಸಚಿವಾಲಯ ಹೊಸ ಮಾಹಿತಿ ನೀಡಿದೆ.


ದೇಶದ ಕೊರೋನಾ ಪ್ರಕರಣಗಳಲ್ಲಿ ಅರ್ಧದಷ್ಟು ಕೊಡುಗೆ ಕೇರಳ ಮತ್ತು ಮಹಾರಾಷ್ಟ್ರದ್ದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇರಳದ ಎಲ್ಲಾ 14 ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ 15 ಜಿಲ್ಲೆಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಕೊರೋನಾ ಪ್ರಕರಣಗಳ ಇಳಿಕೆ ಪ್ರಮಾಣವೂ ಕಡಿಮೆ. ಹೀಗಾಗಿ ಈ ಎರಡು ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ