ಕೊರೊನಾ ಗೆದ್ದ 96 ವರ್ಷದ ವೃದ್ಧೆ ಮನೆಯಲ್ಲಿ ಸಂಭ್ರಮ
ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ 96 ವರ್ಷದ ವೃದ್ಧೆಯೊಬ್ಬಳು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದು, ಕೋವಿಡ್ – 19 ಸವಾಲು ಹಾಕಿದ್ದಾಳೆ.
ಕೋವಿಡ್ ಸೋಂಕು ತಗುಲಿ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ 96 ವರ್ಷದ ವಯೋವೃದ್ಧೆ ಮನೆಯಲ್ಲಿ ಸಂಭ್ರಮ, ಸಡಗರ ಮನೆ ಮಾಡಿದೆ.
ಹಿರಿಯೂರು ನಗರದಲ್ಲಿ ನಿವಾಸಿ ಗೋವಿಂದಮ್ಮನವರಿಗೆ ಕೋವಿಡ್ ಸೋಂಕು ದೃಢ ಪಟ್ಟಿತ್ತು. ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ. ಕೊರೊನಾ ಸೋಂಕು ಗೆದ್ದು ಬಂದ ಕರ್ನಾಟಕದ ಎರಡನೆಯ ಅತ್ಯಂತ ಹಿರಿಯರು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.