ಕೊರೊನಾ ಪಾಸಿಟಿವ್ ಗರ್ಭಿಣಿಗೆ ನಾರ್ಮಲ್ ಹೆರಿಗೆ

ಸೋಮವಾರ, 18 ಮೇ 2020 (16:18 IST)
ಕೊರೊನಾ ಪಾಸಿಟಿವ್ ಇದ್ದ ಗರ್ಭಿಣಿಗೆ ವೈದ್ಯರು ಸುಸೂತ್ರ ಹೆರಿಗೆ ಮಾಡಿಸಿ ಮಹತ್ವದ ಸಾಧನೆ ಮಾಡಿದ್ದಾರೆ.

ಮಹಾರಾಷ್ಟ್ರದ ನವಿ ಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ್ದ ಕೋವಿಡ್-19 ರೋಗಿ ಸಂಖ್ಯೆ 1176 ಗರ್ಭಿಣಿಗೆ ಹೆರಿಗೆ ಮಾಡಿಸುವುದರ ಮೂಲಕ ವೈದ್ಯರು ಮತ್ತೊಂದು ಸಾಧನೆ ಮಾಡುವುದರ ಜೊತೆಗೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೇ 13 ರಂದು ವಿಜಯಪುರ ಜಿಲ್ಲೆಗೆ ಖಾಸಗಿ ವಾಹನದ ಮೂಲಕ ಆಗಮಿಸಿದ್ದ 7 ಜನರಲ್ಲಿ 5 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಇವರಲ್ಲಿ ಓರ್ವ ಗರ್ಭಿಣಿ ಒಳಗೊಂಡಿದ್ದಾರೆ. ಜಿಲ್ಲೆಗೆ ಆಗಮಿಸಿದ್ದ ಈ ಮಹಿಳೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು.

ತೀವ್ರ ವೇದನೆಯಿಂದಾಗಿ ದಾಖಲಾಗಿದ್ದ ಈ ಗರ್ಭಿಣಿಗೆ ಕೋವಿಡ್-19 ರೋಗಿಗಳಿಗಾಗಿ ಇರುವ ಎಂ.ಸಿ.ಎಚ್ ಆಸ್ಪತ್ರೆಯ ವಿಶೇಷ ಹೆರಿಗೆ ಕೋಣೆಯಲ್ಲಿ ನಾರ್ಮಲ್ ಹೆರಿಗೆ ಮಾಡಲಾಗಿದ್ದು, ಜನಿಸಿದ ಮಗುವಿನ ವರದಿ ನೆಗೆಟಿವ್ ಬಂದಿದೆ ಎಂದು ಡಿಸಿ ವೈ.ಎಸ್ ಪಾಟೀಲ ಸ್ಪಷ್ಟ ಪಡಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ