ಕೊರೊನಾ ಎಫೆಕ್ಟ್ : ಬಾಗಲಕೋಟೆ ವೃದ್ಧನ ಸಾವಿಗೆ ರಾಯಚೂರು ನಂಟು

ಶನಿವಾರ, 4 ಏಪ್ರಿಲ್ 2020 (20:33 IST)
ಬಾಗಲಕೋಟೆಯಲ್ಲಿ ಕರೊನಾ ವೈರಸ್ ಸೋಂಕಿಗೆ ಬಲಿಯಾದ ವೃದ್ಧನ ಮಕ್ಕಳ ನಂಟು ರಾಯಚೂರು ಜಿಲ್ಲೆಗೆ ಇತ್ತು ಎನ್ನುವ ವಿಷಯ ಬಯಲಾಗಿದೆ.

ವೃದ್ಧನ ಮಕ್ಕಳ ಜೊತೆಗೆ ಬೆಂಗಳೂರಿನಿಂದ ಲಿಂಗಸುಗೂರು ಪಟ್ಟಣಕ್ಕೆ ಆಗಮಿಸಿದ್ದ ತಾಲೂಕಿನ ಯುವಕ, ಯುವತಿ ಇಬ್ಬರನ್ನು ಶಂಕಿತ ಆಧಾರದ ಮೇಲೆ ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಲಿಂಗಸುಗೂರಿನ ಸ್ವಾಮಿ ವಿವೇಕಾನಂದ ನಗರದ ಯುವತಿ ಮತ್ತು ಆಕೆಯ ದೊಡ್ಡಪ್ಪನ ಮಗನೆಂದು ಹೇಳಲಾಗುವ ತಾಲೂಕಿನ ಮಿಂಚೇರಿ ಗ್ರಾಮದ ಯುವಕ ಬಾಗಲಕೋಟೆಯಲ್ಲಿ ಕರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ವೃದ್ದನ ಮಕ್ಕಳ ಸ್ನೇಹಿತರಾಗಿದ್ದಾರೆ. ಒಂದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆಂದು ಹೇಳಲಾಗುತ್ತಿದ್ದು, ಮಾ.23 ರಂದು ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳುತ್ತಿದ್ದ ಮೃತ ವೃದ್ಧನ ಮಕ್ಕಳ ಜತೆಗೆ 10 ದಿನದ ಹಿಂದೆ ಇನ್ನೊವಾ ವಾಹನದಲ್ಲಿ ಯುವಕ ಮತ್ತು ಯುವತಿ ಇಲಕಲ್‌ವರೆಗೆ ಬಂದಿದ್ದರು.

ಅಲ್ಲಿಂದ ಮತ್ತೊಂದು ವಾಹನದ ಮೂಲಕ ಲಿಂಗಸುಗೂರಿಗೆ ಬಂದಿದ್ದಾರೆ. ಈ ವಾಹನದಲ್ಲಿ ಮುದ್ದೇಬಿಹಾಳ ಮತ್ತು ಕಸಬಾ ಲಿಂಗಸುಗೂರಿನ ಹಲವರು ಕೂಡಾ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ