ವರ್ಚಸ್ಸುಇರುವವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟಾಭಿಷೇಕ ಮಾಡಿ: ಡಿಕೆಶಿಗೆ ಗುಮ್ಮಿದ್ರ ಜಾರಕಿಹೊಳಿ
ವರಿಷ್ಠರ ಬಳಿ ನನ್ನನ್ನು ಅಧ್ಯಕ್ಷ ಮಾಡಿ ಅಂತ ಕೇಳಿಲ್ಲ. ಆದರೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಮಾಡಿ ಎಂದು ಹೇಳಿದ್ದೇನೆ. ಇವರು ಇರಬೇಕು ಬೇಡ ಎಂಬ ಬಗ್ಗೆ ಗೊಂದಲಗಳಿವೆ. ಹೀಗಾಗಿ ಎಲ್ಲ ಗೊಂದಲ ಗಳಿಗೆ ಇತಿಶ್ರೀ ಹಾಡಿ ಎಂದು ಸುರ್ಜೆವಾಲಾಗೆ ಹೇಳಿದ್ದೇನೆ. ಡಿಕೆಶಿ ಅವರೇ ಮುಂದುವರಿಬೇಕಾ ಬೇಡ್ವಾ ಎನ್ನೋದನ್ನು ಹೈಕಮಾಂಡ್ ತೀರ್ಮಾನಿಸಲಿ ಎಂದು ತಿಳಿಸಿದ್ಧಾರೆ.