1.25 ಲಕ್ಷ ಜನರಲ್ಲಿ ಕೊರೊನಾ ವೈರಸ್ ಸೋಂಕು

ಗುರುವಾರ, 12 ಮಾರ್ಚ್ 2020 (17:02 IST)
ಜಾಗತಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಮಹಾಮಾರಿಯು 1. 25 ಲಕ್ಷ ಜನರಲ್ಲಿ ಕಾಣಿಸಿಕೊಂಡಿದೆ.

ಕೊರೊನಾ ವೈಸರ್ (ಕೋವಿಡ್ – 19) ಜಾಗತಿಕ ಮಹಾಮಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.

ಕೊರೊನಾ ಸೋಂಕು ಸಾಮಾನ್ಯ ಜ್ವರಕ್ಕಿಂತ 10 ಪಟ್ಟು ಹೆಚ್ಚಾಗಿದೆ. ಈ ವಿಷಯ ಜನರಲ್ಲಿ ಚಿಂತೆಗೀಡು ಮಾಡುತ್ತಿದೆ.

114 ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹರಡಿಕೊಂಡಿದೆ. ಜಾಗತಿಕವಾಗಿ ಕೊರೊನಾ ಬಹುದೊಡ್ಡ ಸವಾಲು ತಂದೊಡ್ಡಿದ್ದು, ಭಾರೀ ಪ್ರಮಾಣದ ಭೀತಿಗೆ ಕಾರಣವಾಗುತ್ತಿದೆ.

ವೈರಸ್ ಹರಡದಂತೆ ಎಲ್ಲ ದೇಶಗಳು ನಿಗಾ ವಹಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ