ಈ ಕುರಿತು ಮಾಹಿತಿ ನೀಡಿರುವ ಕೋವಿನ್ ಪ್ಲಾಟ್‌ಫಾರ್ಮ್ ಮುಖ್ಯಸ್ಥ ಡಾ.ಆರ್.ಎಸ್.ಶರ್ಮಾ, 15-18 ವರ್ಷ ವಯಸ್ಸಿನ ಮಕ್ಕಳು ಜನವರಿ 1 ರಿಂದ ಕೋವಿನ್ ಆಯಪ್ ನಲ್ಲಿ ನೋಂದಾಯಿಸಲು ಸಾಧ್ಯವಾಗುತ್ತದೆ. ಕೋವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಲು, ಮಕ್ಕಳು 10 ನೇ ತರಗತಿಯ ಗುರುತಿನ ಚೀಟಿಯನ್ನು ಬಳಸಬಹುದು” ಎಂದಿದ್ದಾರೆ.
ಇನ್ನು ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಡೋಸ್ ಅನ್ನು ಜನವರಿ 10, 2022 ರಿಂದ ನೀಡಲಾಗುವುದು.