ಬಂದ್ ಗೊಂದಲಕ್ಕೆ ಜನರು ಕನ್ಫ್ಯೂಸ್

ಬುಧವಾರ, 29 ಡಿಸೆಂಬರ್ 2021 (18:42 IST)
ಬಂದ್ ಗೆ ಅವಕಾಶ ಕೋರಿ ಇನ್ನು ಅನುಮತಿ ಪಡೆದಿಲ್ಲ. ಬಲವಂತದ ಬಂದ್ ಗೆ ಅವಕಾಶ ನೀಡದಿರಲು ಸರ್ಕಾರ, ಪೊಲೀಸ್ ಇಲಾಖೆ ನಿರ್ಧರಿಸಿದೆ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಗಷ್ಟೇ ಅವಕಾಶ. ಒತ್ತಾಯಪೂರ್ವಕವಾಗಿ ಬಂದ್ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಖಡಕ್ ಸೂಚನೆ ನೀಡಿದ್ದಾರೆ. ಶೇ.50ರಷ್ಟು ಭಾಗ ಕರ್ನಾಟಕ ಸ್ತಬ್ಧವಾಗೋದು ಬಹುತೇಕ ಅನುಮಾನ. ಈವರೆಗೆ ಶೇ.30 ರಷ್ಟು ಸಂಘಟನೆಗಳಷ್ಟೇ ಬಂದ್ ಗೆ ಬೆಂಬಲ ನೀಡಿವೆ. ಕರ್ನಾಟಕ ಬಂದ್ ಬೆಂಗಳೂರಲ್ಲಿ ಕೆಲವೇ ಪ್ರತಿಭಟನೆಗಷ್ಟೇ ಸೀಮಿತವಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.
 
ಡಿ. 31ರ ಬಂದ್ ಗೆ ಬೆಂಬಲ ನೀಡಿರುವ ಸಂಘಟನೆಗಳು
 
- ಬೆಂಗಳೂರು ಆದರ್ಶ ಆಟೋ ಯೂನಿಯನ್
 
- ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘಟನೆ ಒಕ್ಕೂಟ
 
- ಕರವೇ ಪ್ರವೀಣ್ ಶೆಟ್ಟಿ ಬಣದಿಂದ‌ ಬೆಂಬಲ (ಬಂದ್ ದಿನಾಂಕ ಬದಲಿಗೆ ಮನವಿ)
 
 
ಬಂದ್ ಗೆ ಬೆಂಬಲ ನೀಡದ ಸಂಘಟನೆಗಳು..!
 
- ನಾರಾಯಣಗೌಡ ಕರವೇ ಸಂಘಟನೆ
 
- ಪೀಸ್ ಆಟೋ ಅಸೋಸಿಯೇಷನ್
 
- ಬೆಂಗಳೂರು ಹೋಟೆಲ್ ಮಾಲೀಕರ ಸಂಘ
 
- ಕರ್ನಾಟಕ ರಾಜ್ಯ ಖಾಸಗಿ ಬಸ್ ಟ್ರಾವಲ್ಸ್ ಅಸೋಸಿಯೇಷನ್
 
 
ಯಾರು ಯಾರು ನೈತಿಕ ಬೆಂಬಲ ನೀಡ್ತಿದ್ದಾರೆ..?
 
- ಲೇಬರ್ಸ್ ವರ್ಕರ್ಸ್ ಯೂನಿಯನ್
 
- ಬಾರ್ ಅಂಡ್ ರೆಸ್ಟೊರೆಂಟ್, ಪಬ್ ಮಾಲೀಕರ ಸಂಘ
 
- ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ಸಂಘಟನೆ (ಕ್ಯಾಮ್ಸ್, ರುಪ್ಸಾ)
 
- ಪೆಟ್ರೋಲ್ ಬಂಕ್ ಮಾಲೀಕರ ಸಂಘ
 
- ದಾಸನಪುರ ಎಂಪಿಎಂಸಿ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘ
 
- ಏರ್ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಬಂದ್
 
 
ಬಂದ್ ಗೆ ಬಗ್ಗೆ ಸೈಲೆಂಟಾಗಿರುವ ಸಂಘಟನೆಗಳು..!
 
- ವಿವಿಧ ರೈತ ಸಂಘಟನೆಗಳು
 
- ಬೆಂಗಳೂರು ಬಟ್ಟೆ ಅಂಗಡಿ ಮಾಲೀಕರ ಸಂಘ
 
- ಬೆಂಗಳೂರು ಮಾಲ್ ಅಸೋಸಿಯೇಷನ್‌
 
- ಪೀಣ್ಯಾ ಕೈಗಾರಿಕಾ ಸಂಘ
 
- ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ
 
- ಕರ್ನಾಟಕ ರಾಜ್ಯ ಜಿಮ್ ಮಾಲೀಕರ ಸಂಘ
 
- ಸಾರಿಗೆ ನೌಕರರ ಕೂಟ
 
- ಲಾರಿ ಚಾಲಕರು ಮತ್ತು ಮಾಲೀಕರ ಸಂಘ
 
- ಯಶವಂತಪುರ ಎಪಿಎಂಸಿ ಮಾರುಕಟ್ಟೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ