ಮತ್ತೆ ಮೂವರಲ್ಲಿ ಕೊರೊನಾ ವೈರಸ್ : ಸೋಂಕಿತರ ಸಂಖ್ಯೆ 6 ಕ್ಕೆ ಏರಿಕೆ
ರಾಜ್ಯದ ಈ ಜಿಲ್ಲೆಯಲ್ಲಿ ಮತ್ತೆ ಮೂವರು ಜನರಲ್ಲಿ ಕೊರೊನಾ ಲಕ್ಷಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 6 ಕ್ಕೆ ಏರಿಕೆಯಾದಂತಾಗಿದೆ.
ಭಟ್ಕಳ ಪಟ್ಟವೊಂದರಲ್ಲೇ ಸೋಂಕು ಪೀಡಿತರ ಸಂಖ್ಯೆ ಆರಕ್ಕೇರಿದೆ. ದುಬೈನಿಂದ ಬಂದಿದ್ದವನು, ಈಗ ಈತನ 55 ವರ್ಷದ ಪತ್ನಿ, 22 ಹಾಗೂ 28 ವರ್ಷದ ಇಬ್ಬರು ಪುತ್ರಿಯರು ಸೇರಿ ಮೂವರು ಸದಸ್ಯರಲ್ಲಿಯೂ ಸೋಂಕು ಇದೆ.
ಕೊರೊನಾ ಸೊಂಕಿತರು ನೆವಿ ಆಸ್ಪತ್ರೆಗೆ ಶಿಪ್ಟ್: ಭಟ್ಕಳದ ಎಲ್ಲಾ ಆರು ಕೊರೊನಾ ಸೋಂಕಿತರನ್ನು ಒಬ್ಬೊಬ್ಬರಾಗಿ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಯ ಐಎನ್‌ಎಸ್ ಪತಂಜಲಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.