ನದಿ ತೀರದಲ್ಲಿ ಸಿಕ್ಕ ಶವ: ಕೊಲೆನಾ? ಆತ್ಮಹತ್ಯೆಯೋ?

ಗುರುವಾರ, 8 ಆಗಸ್ಟ್ 2019 (19:24 IST)
ನದಿ ತೀರದಲ್ಲಿ ಶವವೊಂದು ದೊರಕಿದ್ದು, ಸಾವಿನ ಸುತ್ತ ಅನುಮಾನ ವ್ಯಕ್ತವಾಗತೊಡಗಿದೆ.

ಕಾಕತಿ ಗ್ರಾಮದ ಮಾರ್ಕಂಡೇಯ ನದಿಯ ಹತ್ತಿರ ಇರುವ ನೀರಿನ ತಗ್ಗಿನಲ್ಲಿ  ಶವ ಪತ್ತೆಯಾಗಿದೆ. ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ಧಾವಿಸಿದ ಕಾಕತಿ  ಪೊಲೀಸ್ ಎಎಸ್ಐ ನವಲೆ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ  ಶವ ಹೊರ ತೆಗೆಯಲಾಯಿತು.

ನಂತರ ಕುಂಟುಂಬದವರಿಂದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೆಳಗಾವಿ ತಾಲೂಕಿನ ಕಾಕತಿಯ ಶಾಸ್ತ್ರಿ ನಗರದ ನಿವಾಸಿ ಮಾರುತಿ ಹಳಿಮನಿ(52) ಸಂಶಯಾಸ್ಪದ ಸಾವನ್ನಪ್ಪಿದವರು.  

ಘಟನೆ ವಿವರ :
ಮೃತ ಮಾರುತಿ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಗ್ರಾನೈಟ್ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ  ಕೆಲಸ ಮಾಡುತ್ತಿದ್ದಾರೆ. ಮಳೆಯ ಕಾರಣದಿಂದಾಗಿ ಕಳೆದ  2 ದಿನಗಳಿಂದ ಕಂಪನಿಗೆ ರಜೆಯಿದ್ದು  ಮನೆಯಲ್ಲಿಯೇ ಇದ್ದರು.

ಮಾರುತಿ ಸಂಜೆ ವೇಳೆಗೆ ಕಾಕತಿಯಿಂದ ಮಾರ್ಕಂಡೇಯ ಸಕ್ಕರೆ ಕಾರ್ಖಾನೆಯ ರಸ್ತೆ ಪಕ್ಕದಲ್ಲಿರುವ ನೀರು ತುಂಬಿದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಒಂದೆಡೆಯಾದರೆ, ಇದು ಕೊಲೆಯಾಗಿದೆ ಎಂದು ಖಚಿತವಾಗಿ ಯಾವುದೇ ಮೂಲಗಳಿಂದ ಮಾಹಿತಿ ಹಾಗೂ ಕುಟುಂಬದವರಿಂದ ಯಾವುದೇ ಸಂಶಯ ವ್ಯಕ್ತವಾಗದ ಕಾರಣ ಆಕಸ್ಮಿಕ ಸಾವು ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ