ಅನೈತಿಕ ಸಂಬಂಧಕ್ಕಾಗಿ ಹೆತ್ತ ಮಗುವನ್ನೇ ಕೊಲೆ ಮಾಡಿದ ಪಾಪಿ ತಾಯಿ

ಗುರುವಾರ, 8 ಆಗಸ್ಟ್ 2019 (11:42 IST)
ಚೆನ್ನೈ : ಅನೈತಿಕ ಸಂಬಂಧ ಹೊಂದಿದ್ದ ತಾಯಿ, ಪ್ರಿಯಕರನ ಜೊತೆ ಸೇರಿ ತನ್ನ ಒಂದೂವರೆ ವರ್ಷದ ಮಗುವನ್ನು ಕೊಲೆ ಮಾಡಿದ ಘಟನೆ ತಮಿಳು ನಾಡಿನ ನೆಲೈನಲ್ಲಿ ನಡೆದಿದೆ.ವದಕಾಶಿ (35) ಮಗುವನ್ನು ಕೊಲೆ ಮಾಡಿದ ತಾಯಿ. ವದಕಾಶಿ ತಿರುವೆಂಕಟಂನ ಪಾಲಂಗಿಟಿಯ ನಿವಾಸಿಯಾಗಿರುವ ರಾಜ್ ಎಂಬವರನ್ನು ಮದುವೆಯಾಗಿದ್ದಳು. ಆದರೆ ಈಕೆಗೆ ತನ್ನ ಮನೆಗೆ ಹಾಲು ವಿತರಿಸುತ್ತಿದ್ದ ಸ್ವಾಮಿನಾಥನ್ ಜೊತೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ತಿಳಿದ ಆಕೆಯ ಪತಿ ತನ್ನ  ಮಗುವನ್ನು ಚಿಕ್ಕಪ್ಪನ ಮನೆಗೆ ಕಳುಹಿಸಿದ್ದನು.

 

ಆದರೆ ವದಕಾಶಿ ತನ್ನ ಮಗುವನ್ನು ಅಲ್ಲಿಂದ ಕರೆದುಕೊಂಡು ಬಂದು ಸ್ವಾಮಿನಾಥನ್ ಮನೆಯಲ್ಲಿ ವಾಸವಾಗಿದ್ದಳು. ಆದರೆ ಮಗು ಹೊಟ್ಟೆ ಹಸಿವು ತಾಳಲಾರದೇ ಜೋರಾಗಿ ಅತ್ತಿದ್ದಕ್ಕೆ ಇಬ್ಬರು ಸೇರಿ ಮಗುವಿಗೆ ಹಿಗ್ಗಾಮಗ್ಗಾ ಹೊಡೆದಿದ್ದಾರೆ. ಇದರ ಪರಿಣಾಮ ಮಗು ಸಾವನಪ್ಪಿದೆ.

 

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು  ತಾಯಿ ಹಾಗೂ ಪ್ರಿಯಕರನ ವಿಚಾರಣೆ ನಡೆಸಿದ ವೇಳೆ ಇಬ್ಬರು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ