ಬಿಎಸ್‌ವೈ ಭ್ರಷ್ಟಾಚಾರ ಮಾಡಿದ್ರು ಕ್ಲೀನ್ ಚಿಟ್: ಜಿ.ಪರಮೇಶ್ವರ್

ಗುರುವಾರ, 27 ಅಕ್ಟೋಬರ್ 2016 (15:54 IST)
ಬಿಎಸ್‌ವೈ ಭ್ರಷ್ಟಾಚಾರ ಮಾಡಿದ್ರು, ಆದರೂ ಸಹ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
 
ಕೆಪಿಸಿಸಿ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರು 6 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾರ್ಥಕ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. 
 
ಈ ವೇಳೆ ಮಾತನಾಡಿದ ಅವರು, ಕಿಕ್ ಬ್ಯಾಕ್ ಪ್ರಕರಣದಲ್ಲಿ ನ್ಯಾಯಾಲಯ ನಿಮಗೆ ಕ್ಲೀನ್ ಚಿಟ್ ನೀಡಿರಬಹುದು. ಆದರೆ, ನಿಮ್ಮ ಅಕೌಂಟ್‌ಗೆ ಬಂದ ಹಣ ಯಾವ ಮೂಲದ್ದಾಗಿದೆ ? ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿದ್ದೀರಾ. ಇದು ಒಬ್ಬ ಯಡಿಯೂರಪ್ಪನ ವಿಚಾರವಲ್ಲ.ಬಿಜೆಪಿಯಲ್ಲಿ ಇಂತಹ ಭ್ರಷ್ಟರಿರುವುದರಿಂದ  ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಅವಕಾಶ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಈಗಾಗಲೇ 150 ಸೀಟ್‌ಗಳನ್ನು ಗೆಲ್ಲುವ ಮೂಲಕ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಎಸ್‌ವೈ ಹೇಳುತ್ತಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಸಚಿವ ಸ್ಥಾನವು ಹಂಚಿಕೆಯಾಗಿದೆ ಎಂದು ಆರೋಪಿಸಿದರು.
 
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರಸ್ ಪಕ್ಷವನ್ನು ಆಡಳಿತಕ್ಕೆ ತರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು. 
 
ಅದೃಷ್ಟದಿಂದ ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ ಎಂದು ಕೆಲವರು ಮಾತಾನಾಡುತ್ತಿದ್ದಾರೆ. ಆದರೆ, ನಾನು ಕಷ್ಟು ಪಟ್ಟು ಈ ಮಟ್ಟಕ್ಕೆ ಬೆಳದಿದ್ದೇನೆ. 30 ವರ್ಷಗಳಿಂದ ಕೆಪಿಸಿಸಿಯಲ್ಲಿ ಪದಾಧಿಕಾರಿಯಾಗಿದ್ದೇನೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ