ಭಾರಿ ಭ್ರಷ್ಟಾಚಾರ: ಸಚಿವ ಖಾದರ್ ಸೇರಿದಂತೆ 10 ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು

ಶುಕ್ರವಾರ, 20 ಮೇ 2016 (13:08 IST)
ಉಚಿತ ಔಷಧಿ ವಿತರಣೆಯಲ್ಲಿ ಬಾರಿ ಪ್ರಮಾಣದ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿ ಆರೋಗ್ಯ ಸಚಿವ ಯು.ಟಿ.ಖಾದರ್ ಸೇರಿದಂತೆ 10 ಅಧಿಕಾರಗಳ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯ ಎಸ್‌.ಆರ್.ರಮೇಶ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ.

ಉಚಿತ ಔಷಧಿ ಪೂರೈಸುವ ಯೋಜನೆಯಲ್ಲಿ ಅಸ್ಥಿತ್ವದಲ್ಲಿ ಇಲ್ಲದ ಕಂಪನಿಗಳ ಬಿಲ್‌ಗಳ ದಾಖಲಿಸಿ, 44.4 ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದಾರೆಂದು ಆರೋಗ್ಯ ಸಚಿವ ಯುಟಿ ಖಾದರ್, ಅರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಇಲಾಖೆ ಆಯುಕ್ತ ಪಿ.ಎಸ್‌.ವಸ್ತ್ರದ ಸೇರಿದಂತೆ 10 ಅಧಿಕಾರಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. 
 
ಈ ಯೋಜನೆಯಲ್ಲಿ ಪೂರೈಸುವ ಔಷಧಿಗಳನ್ನು ಮೂಲ ಬೆಲೆಗಿಂತ 15 ಪಟ್ಟು ಹೆಚ್ಚಿನ ಬಿಲ್‌ನ್ನು ತೋರಿಸಿ, 88 ವಿವಿಧ ಕಂಪನಿಗಳಿಂದ ಔಷಧಿ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ.
 
ಕೇಂದ್ರ ಸರಕಾರದ ಅನುದಾನವನ್ನು ದರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಅಗತ್ಯ ದಾಖಲೆಗಳ ಸಮೇತ ಬಿಬಿಎಂಪಿ ಮಾಜಿ ಸದಸ್ಯ ಎಸ್‌.ಆರ್.ರಮೇಶ, ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ