ಸಾರಿಗೆ ಇಲಾಖೆ ಕಚೇರಿಗಳಲ್ಲಿ ಭ್ರಷ್ಟಾಚಾರ!

ಬುಧವಾರ, 6 ಜುಲೈ 2022 (16:07 IST)
ಬೆಂಗಳೂರು ; ಆರ್ಟಿಓ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿ ಕುಳಿತಿರೋ ಅಧಿಕಾರಿಗಳು ಮಾಡಿರೋದು ಮಾತ್ರ ಇಲಾಖೆಗೆ ದ್ರೋಹದ ಕೆಲಸ. 

ಯೆಸ್ ಅಕ್ರಮವನ್ನ ತಡೆಯಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೇ ಸರ್ಕಾರದ ಖಜಾನೆಗೆ ಖನ್ನ ಹಾಕಿದ್ದಾರೆ.

ನಿಯಮ ಬಾಹಿರವಾಗಿ ನೂರಾರು ದುಬಾರಿ ವಾಹನಗಳನ್ನ ಅಕ್ರಮ ನೋಂದಾಣಿ ಮಾಡಿ ಕೋಟಿ ಕೋಟಿ ವಂಚನೆ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರವೆಸಗಿದ್ದಾರೆ. ಅಕ್ರಮಗಳ ಕೊಂಪೆಯಾಗಿರುವ ರಾಜ್ಯ ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಬೃಹತ್ ಗೋಲ್ಮಾಲ್ ಬಯಲಾಗಿದೆ.

ಐಷಾರಾಮಿ ಕಾರುಗಳುನ್ನ ಅಕ್ರಮ ನೋಂದಾಣಿ ಮಾಡೋ ಮೂಲಕ ಸರ್ಕಾರದ ಬೊಕ್ಕಸಕ್ಕೆ 100ಕ್ಕೂ ಅಧಿಕ  ಕೋಟಿ ರಸ್ತೆ ತೆರಿಗೆ ವಂಚಿಸಿರೋದು ತನಿಖೆಯಿಂದ ಬಯಲಾಗಿದೆ.

20  ಲಕ್ಷಕ್ಕಿಂತ ಅಧಿಕ ಬೆಲೆಯ ಕಾರುಗಳ ನೋಂದಣಿ ಹಾಗೂ ತೆರಿಗೆ ಪಾವತಿ ಬಗ್ಗೆ ತನಿಖೆ ನಡೆಸಲು ರಚಿಸಿದ್ದ ಹಿರಿಯ ಅಧಿಕಾರಿಗಳ ನೇತೃತ್ವದ ಸಮಿತಿ ಸಾರಿಗೆ ಇಲಾಖೆಗೆ ಮಧ್ಯಂತರ ವರದಿ ಸಲ್ಲಿಸಿದೆ.

ಈ ವರದಿಯಲ್ಲಿ ಅಕ್ರಮ ನೋಂದಾಣಿ ಮೂಲಕ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ತನಿಖೆಯಲ್ಲಿ ಸಾಕ್ಷಿ ಸಮೇತ ಸಾಬೀತಾಗಿದೆ. ಸದ್ಯ 700 ವಾಹನಗಳನ್ನ ಪರಿಶೀಲನೆ ಮಾಡಿದ್ದಾಗ 120 ಐಷಾರಾಮಿ ಕಾರುಗಳನ್ನ ಟ್ಯಾಕ್ಸ್ ಕಟ್ಟಿಸಿಕೊಳ್ಳದೆ ಬೆಂಗಳೂರಿನ ಕೋರಮಂಗಲ, ಜಯನಗರ ಹಾಗೂ ಕಸ್ತೂರಿನಗರ ಆರ್ ಟಿ ಓ ಕಚೇರಿಗಳಲ್ಲಿ ಅಧಿಕಾರಿಗಳು ನೋಂದಾಣಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ