ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಬೆಂಗಳೂರು ( Bngaluru ) ಸಿಸಿಬಿ ಪೊಲೀಸರು ( CCB Police ) ರೌಡಿಶೀಟರ್ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ರಾಜಕಾರಣಿಗಳ ಜೊತೆಗೆ ಪೋಟೋಸ್ ತೆಗೆದುಕೊಂಡು ವೈರಲ್ ಮಾಡುತ್ತಿರುವ ಕೆಲ ರೌಡಿಗಳ ಮನೆಗೆ ಹೋಗಿ ಪೊಲೀಸರು ವಾರ್ನಿಂಗ್ ಮಾಡುತ್ತಿದ್ದಾರೆ.
ಒಂದು ವಾರದಿಂದ ಈ ಬಗ್ಗೆ ಸ್ಪೆಷಲ್ ಡ್ರೈವ್ ಶುರುಮಾಡಿರುವ ಪೊಲೀಸರು ನಗರದ ಕುಖ್ಯಾತ ರೌಡಿಶೀಟರ್ ಗಳ ಚಲನವಲನಗಳು, ಅವರ ಕೇಸ್ಗಳ ಬಗ್ಗೆ ನಿಗಾ ಇಟ್ಟಿದ್ದಾರೆ. ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಶಂಕೆ ವ್ಯಕ್ತವಾದರೆ ತಕ್ಷಣ ಬಂಧಿಸಲು ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ಆಕ್ಷೇಪ ಸಲ್ಲಿಸಲು ಸರ್ಕಾರ ಜುಲೈ 8 ರವರೆಗೆ ಕಾಲಾವಕಾಶ ನೀಡಿದೆ. ಇದುವರೆಗೆ ೨ ಸಾವಿರಕ್ಕೂ ಹೆಚ್ಚು ಆಕ್ಷೇಪ ಸಲ್ಲಿಕೆಯಾಗಿದ್ದು, ವಾರ್ಡ್ ಬೌಂಡರಿಗೆ ಸಂಬಂಧಿಸಿಯೇ ಹೆಚ್ಚು ಆಕ್ಷೇಪ ಸಲ್ಲಿಕೆಯಾಗಿದೆ. ವಾರ್ಡ್ ಹೆಸರುಗಳ ಮರು ನಾಮಕರಣಕ್ಕೂ ಸಾಕಷ್ಟು ಆಕ್ಷೇಪ ವ್ಯಕ್ತವಾಗುತ್ತಿದೆ. ಇನ್ನೂ ಎಂಟು ದಿನಗಳ ಕಾಲಾವಕಾಶದ ಬಳಿಕ ಆಕ್ಷೇಪಗಳನ್ನು ಸರ್ಕಾರ ಪರಿಶೀಲಿಸಲಿದೆ.